ETV Bharat / state

ಅಂತಾರಾಷ್ಟ್ರೀಯ ಫೋಟೋಗ್ರಫಿ ಸ್ಪರ್ಧೆ: ಅಂಕೋಲಾದ ಯುವಕನಿಗೆ ಚಿನ್ನದ ಪದಕ - ಪಿಂಡಲ್ ಎಂಬ ಸೋಶಿಯಲ್ ಫೋಟೋಗ್ರಫಿ ಆ್ಯಪ್

ಇವರು ಕರಾವಳಿ ಭಾಗದ ದೈನಂದಿನ ಬದುಕು, ಕಡಲು ಹಾಗೂ ಪ್ರಕೃತಿ ಸೊಬಗಿನಲ್ಲಿ ತೆಗೆದ ಫೋಟೋಗಳನ್ನು ಸ್ಪರ್ಧೆಗೆ ಕಳುಹಿಸಿದ್ದರು. ಜಗತ್ತಿನ 20 ತೀರ್ಪುಗಾರರು ಫೋಟೋಗಳಲ್ಲಿ ಅತ್ಯುತ್ತಮವಾದುದನ್ನು ಆಯ್ಕೆ ಮಾಡಿದ್ದು, ಅದ್ರಲ್ಲಿ ಅಂಕೋಲಾದ ಯುವಕನಿಗೂ ಪ್ರಶಸ್ತಿ ಲಭಿಸಿದೆ.

ankola-photographer-wins-international-photography-competition
ಅಂಕೋಲಾದ ಯುವಕನಿಗೆ 100 ಡಾಲರ್ ಅವಾರ್ಡ್​​
author img

By

Published : Aug 27, 2021, 1:37 PM IST

ಕಾರವಾರ (ಉ.ಕ): ಪಿಂಡಲ್ ಎಂಬ ಸೋಶಿಯಲ್ ಫೋಟೋಗ್ರಫಿ ಆ್ಯಪ್ ಆಯೋಜಿಸಿದ್ದ ಅಂತಾರಾಷ್ಟ್ರೀಯ ಫೋಟೋಗ್ರಫಿ ಸ್ಪರ್ಧೆಯಲ್ಲಿ ಭಾರತದ 7 ಮಂದಿ ಆಯ್ಕೆಯಾಗಿದ್ದು, ಅದರಲ್ಲಿ ಅಂಕೋಲಾ ಮೂಲದ ಯುವಕ ಸಹ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ankola-photographer
ಪ್ರಮೋದ್ ಗೌಡ ಫೋಟೋಗ್ರಫಿ

ಪಿಂಡಲ್ ಎಂಬ ಸೋಶಿಯಲ್ ಫೋಟೋಗ್ರಫಿ ಆ್ಯಪ್ #ಫಿಂಡಲ್ಜೆಮ್ ಹ್ಯಾಶ್ ಟ್ಯಾಗ್​ನಡಿ ಜೂನ್​ನಿಂದ ಆಗಸ್ಟ್ 15ರ ವರೆಗೆ ಸ್ಪರ್ಧೆ ಆಯೋಜಿಸಿತ್ತು. ನಿಸರ್ಗ, ಸಂಸ್ಕೃತಿ, ಫುಡ್ & ಡ್ರಿಂಕ್, ಫ್ರೀ ಟೈಮ್ ಫೋಟೋಗ್ರಫಿ, ಸಾಕುಪ್ರಾಣಿಗಳು.. ಹೀಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಇದಕ್ಕೆ ಒಟ್ಟಾರೆ 5000 ಡಾಲರ್ ಬಹುಮಾನ ಘೋಷಿಸಲಾಗಿತ್ತು. #PINDLEGEM ಹ್ಯಾಶ್‌ಟ್ಯಾಗ್‌ನಡಿ ಮೂರು ತಿಂಗಳುಗಳ ಕಾಲ ಫೋಟೋಗಳನ್ನು ಕಳುಹಿಸಲು ಅವಕಾಶ ನೀಡಲಾಗಿತ್ತು.

ankola-photographer
ಪ್ರಮೋದ್ ಗೌಡ ಫೋಟೋಗ್ರಫಿ

ವಿಶ್ವದ ವಿವಿಧೆಡೆಯಿಂದ 4 ಸಾವಿರ ಸ್ಪರ್ಧಾಳುಗಳು ಭಾಗವಹಿಸಿದ್ದರು. ಅಂತಿಮವಾಗಿ ಬುಧವಾರ ಸ್ಪರ್ಧೆಯ ಫಲಿತಾಂಶ ಘೋಷಿಸಲಾಗಿದ್ದು, 50 ವಿಜೇತರನ್ನು ಆಯ್ಕೆ ಮಾಡಲಾಗಿದೆ. ಜಗತ್ತಿನ 20 ತೀರ್ಪುಗಾರರು ಫೋಟೋಗಳಲ್ಲಿ ಅತ್ಯುತ್ತಮವಾದುದನ್ನು ಆಯ್ಕೆ ಮಾಡಿದ್ದಾರೆ. ಇದರಲ್ಲಿ 7 ಮಂದಿ ಭಾರತೀಯರಾದ ಪ್ರಮೋದ್ ಗೌಡ, ಶಿಬಾಸಿಶ್ ಶಾಹ್, ಅವ್ರಾ ಘೋಷ್, ಅನಿರ್ಬನ್ ಪಾನ್, ಅರುಣ್ ಶಾಹ್, ಬರ್ಶಾ ಹಮಾಲ್, ಪ್ರಿಯಾಂಕಾ ಸಹಾನಿ ಸೇರಿದ್ದಾರೆ.

ankola-photographer
ಪ್ರಮೋದ್ ಗೌಡ ಫೋಟೋಗ್ರಫಿ

ಪ್ರಮೋದ್ ಗೌಡ ಫೋಟೋಗ್ರಫಿಗೆ ಸಿಕ್ಕ ಮನ್ನಣೆ

ಇನ್ನು ಭಾರತೀಯರಲ್ಲಿ ವಿಜೇತರಾದವರ ಪೈಕಿ ಪ್ರಮೋದ್ ಗೌಡ ಮೂಲತಃ ಉತ್ತರಕನ್ನಡ ಜಿಲ್ಲೆಯ ಅಂಕೋಲಾದವರು. ಇವರು ಐಟಿ ಇಂಜಿನಿಯರ್ ಆಗಿದ್ದು, ಫೋಟೋಗ್ರಫಿ ಇವರ ಹವ್ಯಾಸವಾಗಿದೆ. ಇವರು ಕರಾವಳಿ ಭಾಗದ ದೈನಂದಿನ ಬದುಕು, ಕಡಲು ಹಾಗೂ ಪ್ರಕೃತಿ ಸೊಬಗಿನಲ್ಲಿ ತೆಗೆದ ಫೋಟೋಗಳನ್ನು ಸ್ಪರ್ಧೆಗೆ ಕಳುಹಿಸಿದ್ದರು. ಫೋಟೋಗಳು ಇದೀಗ ತೀರ್ಪುಗಾರರ ಗಮನ ಸೆಳೆದಿದ್ದು, ಚಿನ್ನದ ಪದಕ ಹಾಗೂ 100 ಡಾಲರ್ ಬಹುಮಾನ ದೊರೆತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.