ಭಟ್ಕಳ: ಪಟ್ಟಣದ ಮುಖ್ಯರಸ್ತೆ ಬದಿಯ ಹಣ್ಣಿನಂಗಡಿಗೆ ಆಕಸ್ಮಿಕ ಬೆಂಕಿ ಬಿದ್ದ ಘಟನೆ ರಾತ್ರಿ ಸಂಭವಿಸಿದೆ.
ಅರ್ಬನ್ ಬ್ಯಾಂಕ್ ಎದುರಿಗಿರುವ ಗುಳ್ಮಿಯ ಮೆಹಬೂಬ್ ಅಲಿ ಎಂಬುವವರಿಗೆ ಸೇರಿದ ಹಣ್ಣಿನಂಗಡಿಗೆ ಬೆಂಕಿ ತಗುಲಿದೆ. ರಾತ್ರಿ ಸೊಳ್ಳೆ ಕಾಟ ತಪ್ಪಿಸಲು ಬತ್ತಿಯನ್ನ ಹಚ್ಚಿದ್ದರೆನ್ನಲಾಗಿದೆ. ಈ ಬತ್ತಿಯೇ ಈ ಅನಾಹುತಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಅಂಗಡಿಯಲ್ಲಿದ್ದ ಹಣ್ಣು, ಹಣ್ಣಿನ ಬಾಕ್ಸ್ ಸುಟ್ಟು ಹೋಗಿವೆ.ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಹೆಸ್ಕಾಂ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದರು.