ETV Bharat / state

ಆಕಸ್ಮಿಕ ಬೆಂಕಿ: ಗುಜರಿ ಅಂಗಡಿ ಸಂಪೂರ್ಣ ಬೆಂಕಿಗಾಹುತಿ - Accidental Fir to gujari shop

ಭಟ್ಕಳ ತಾಲೂಕಿನ ಪುರವರ್ಗ ಗಣೇಶ ನಗರ ಸಮೀಪವಿರುವ ರೈಲ್ವೆ ಹಳಿಯ ಪಕ್ಕದಲ್ಲಿನ ಬಯಲು ಪ್ರದೇಶಕ್ಕೆ ಆಕಸ್ಮಿಕವಾಗಿ ಹೊತ್ತಿಕೊಂಡಿದೆ. ಈ ಬೆಂಕಿ ಪಕ್ಕದಲ್ಲಿರುವ ಗುಜರಿ ಅಂಗಡಿಗೂ ಆವರಿಸಿದ್ದರಿಂದ ಸಂಪೂರ್ಣ ಸುಟ್ಟು ಕರಕಲಾಗಿದೆ.

Accidental Fir to gujari shop in bhatkal
ಆಕಸ್ಮಿಕ ಬೆಂಕಿ: ಗುಜರಿ ಅಂಗಡಿ ಸಂಪೂರ್ಣ ಬೆಂಕಿಗಾಹುತಿ
author img

By

Published : Feb 8, 2021, 5:14 PM IST

Updated : Feb 8, 2021, 5:46 PM IST

ಭಟ್ಕಳ (ಉತ್ತರಕನ್ನಡ): ಭಟ್ಕಳ ತಾಲೂಕಿನ ಪುರವರ್ಗ ಗಣೇಶ ನಗರದ ಬಯಲು ಪ್ರದೇಶಕ್ಕೆ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿ, ಪಕ್ಕದಲ್ಲಿರುವ ಗುಜರಿ ಅಂಗಡಿಗೂ ಆವರಿಸಿದ್ದರಿಂದ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

ಆಕಸ್ಮಿಕ ಬೆಂಕಿ: ಗುಜರಿ ಅಂಗಡಿ ಸಂಪೂರ್ಣ ಬೆಂಕಿಗಾಹುತಿ

ಪುರವರ್ಗ ಗಣೇಶ ನಗರ ಸಮೀಪವಿರುವ ರೈಲ್ವೆ ಹಳಿಯ ಪಕ್ಕದಲ್ಲಿನ ಬಯಲು ಪ್ರದೇಶಕ್ಕೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಗಾಳಿ ಪ್ರಮಾಣ ಹೆಚ್ಚಾಗಿದ್ದರಿಂದ ಈ ಬೆಂಕಿ, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿದ್ದ ಗುಜರಿ ಅಂಗಡಿಗೂ ಆವರಿಸಿದೆ. ಇದರಿಂದ ಅಂಗಡಿಯ ಹಿಂಭಾಗದಲ್ಲಿರುವ ಪ್ಲಾಸ್ಟಿಕ್ ಸಾಮಗ್ರಿಗಳಿಗೆ ಬೆಂಕಿ ತಗುಲಿ ಸಂಪೂರ್ಣ ಹೊಗೆ ಆವರಿಸಿದೆ.

ಓದಿ: ಖಾಕಿ ಕೈಗೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ದರೋಡೆಕೋರರು.. ₹9.48 ಲಕ್ಷ ಬೆಲೆಯ ದ್ವಿಚಕ್ರ ವಾಹನ, 30 ಮೊಬೈಲ್ ವಶ

ಪರಿಣಾಮ ಹೆದ್ದಾರಿಯಲ್ಲಿ ವಾಹನ ಸಂಚಾರ ಕೆಲ ಕಾಲ ಸ್ಥಗಿತಗೊಂಡಿದ್ದು, ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ‌ ಸಿಬ್ಬಂದಿ ಹಾಗೂ ಸ್ಥಳೀಯರು ಬೆಂಕಿ ನಂದಿಸಿದ್ದಾರೆ. ಗುಜರಿ ಅಂಗಡಿ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಮಾಲೀಕರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

Last Updated : Feb 8, 2021, 5:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.