ಕಾರವಾರ: ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೋರ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಗು ಸೇರಿ ಮೂರು ಮಂದಿ ಗಾಯಗೊಂಡಿರುವ ಘಟನೆ ಕಾರವಾರ ತಾಲೂಕಿನ ಮುದಗಾ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ನಡೆದಿದೆ.
ಶಾಫಿಯಾ ಮಹಮ್ಮದ್ ಸಯ್ಯದ್ (65) ಮೃತ ದುರ್ದೈವಿ. ಗೋವಾದಿಂದ ಅಂಕೋಲಾಕ್ಕೆ ವಾಪಸ್ಸಾಗುತಿದ್ದ ವೇಳೆ ಈ ಅವಘಡ ನಡೆದಿದ್ದು, 2 ವರ್ಷದ ಮಗು, ಓಮ್ನಿ ಚಾಲಕ ಜುಬೇರ್ ಮತ್ತು ಮೀನಾಕ್ ಬೋಪೆರ್ ಎಂಬುವವರು ಗಾಯಗೊಂಡಿದ್ದಾರೆ.
ಗಾಯಾಳುಗಗಳನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ನೀಡಲಾಗಿದ್ದು, ಸ್ಥಳಕ್ಕೆ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.