ETV Bharat / state

ಉತ್ತರಕನ್ನಡ: ಕಬ್ಬು ಬೆಳೆಗಾರರು, ಕಾರ್ಖಾನೆಗಳ ನಡುವೆ ಮುಗಿಯದ ಮುಸುಕಿನ ಗುದ್ದಾಟ - ಸಕ್ಕರೆ ಕಾರ್ಖಾನೆಗಳು

ಸಾಗಾಣಿಕೆ ವೆಚ್ಚದ ಕುರಿತಾಗಿ ಉತ್ತರಕನ್ನಡ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆಗಳ ನಡುವೆ ತಿಕ್ಕಾಟ ಮುಂದುವರೆದಿದೆ.

sugarcane growers  Sugar factory  Protest of sugarcane growers
ಉತ್ತರಕನ್ನಡ ಜಿಲ್ಲೆಯಲ್ಲಿ ನಡೆದ ಕಬ್ಬು ಬೆಳೆಗಾರರ ಪ್ರತಿಭಟನೆಯ ದೃಶ್ಯ
author img

By

Published : Jan 27, 2023, 2:17 PM IST

Updated : Jan 27, 2023, 3:20 PM IST

ಕಬ್ಬು ಬೆಳೆಗಾರರು, ಕಾರ್ಖಾನೆಗಳ ನಡುವೆ ಮುಗಿಯದ ಮುಸುಕಿನ ಗುದ್ದಾಟ

ಕಾರವಾರ: ಉತ್ತರಕನ್ನಡ ಜಿಲ್ಲೆಯ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ನಡುವಿನ ಸಂಘರ್ಷ ಮುಂದುವರೆದಿದೆ. ಕಳೆದ ಎರಡು ತಿಂಗಳ ಹಿಂದೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಕ್ಕರೆ ಆಯುಕ್ತರೊಂದಿಗೆ ಕಬ್ಬು ಬೆಳೆಗಾರರ ಸಭೆ ನಡೆದಿತ್ತು. ಬಾಕಿ ಉಳಿದ ಕಬ್ಬು ಸಾಗಾಣಿಕೆ ವೆಚ್ಚದ ಕುರಿತು ತನಿಖೆ ನಡೆಸಿ ಶೀಘ್ರವೇ ನ್ಯಾಯ ಒದಗಿಸಿಕೊಡುವ ಭರವಸೆ ನೀಡಿದ್ದರು. ಅಧಿಕಾರಿಗಳು ನೀಡಿದ ಭರವಸೆ ಹುಸಿಯಾಗಿದೆ. ಇದು ಕಬ್ಬು ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ.

ಹಳಿಯಾಳ ತಾಲೂಕಿನಲ್ಲಿ ಕಬ್ಬು ಬೆಳೆಗಾರರ ಹಾಗೂ ಕಾರ್ಖಾನೆ ನಡುವಿನ ತಿಕ್ಕಾಟ ಸರ್ಕಾರದ ಹಂತ ತಲುಪಿದರೂ ಕೂಡಾ ಬಗೆಹರಿಯುವ ಲಕ್ಷಣ ಮಾತ್ರ ಕಾಣುತ್ತಿಲ್ಲ. ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯು ರೈತರಿಗೆ ಯೋಗ್ಯ ದರ ನೀಡುತ್ತಿಲ್ಲ. ಪ್ರತಿ ಟನ್ ಕಬ್ಬಿಗೆ ಕಟಾವು ಮತ್ತು ಸಾಗಾಟಕ್ಕೆ 893 ರೂಪಾಯಿಯನ್ನು ವೆಚ್ಚ ಪಡೆಯಲಾಗುತ್ತಿದೆ. ಅದರಲ್ಲಿ ಪ್ರತಿ ಟನ್ ಕಬ್ಬು ಸಾಗಾಟ ವೆಚ್ಚಕ್ಕೆ 261 ರೂಪಾಯಿ ಹಾಗೂ ಕಟಾವಿಗೆ 323 ರೂಪಾಯಿ ವೆಚ್ಚ ಹಾಗೂ ಉಳಿದಂತೆ 309 ರೂಪಾಯಿಯನ್ನು ಕಳೆದ 3 ವರ್ಷದಿಂದ ಬಾಕಿ ಉಳಿಸಿಕೊಳ್ಳಲಾಗಿದೆ. ಈ ವಿಚಾರವನ್ನು ಖಂಡಿಸಿ ರೈತರು ಒಂದು ತಿಂಗಳವರೆಗೆ ಪ್ರತಿಭಟನೆ ನಡೆಸಿ, ನ್ಯಾಯ ಒದಗಿಸಲು ಆಗ್ರಹಿಸಿದ್ದರು.

ನಡೆಯದ ಹೆಚ್ಚುವರಿ ವೆಚ್ಚದ ತನಿಖೆ: ''ರೈತರ ಒತ್ತಾಯ ಮಣಿದ ಸಕ್ಕರೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿ, ಕಬ್ಬು ಕಟಾವಿಗೆ ಹೆಚ್ಚುವರಿ ವೆಚ್ಚ ಪಡೆದಿರುವ ಕುರಿತು ತನಿಖೆ ನಡೆಸಿ ಬಾಕಿ ಕೊಡಿಸುವ ಭರವಸೆ ನೀಡಿದ್ದರು. ಆದರೆ, ಹೆಚ್ಚುವರಿ ವೆಚ್ಚದ ತನಿಖೆ ಮಾತ್ರ ನಡೆದಿಲ್ಲ. ಮೋಸದಿಂದ ಪಡೆದ ಹಣವನ್ನು ಕೂಡಲೇ ರೈತರಿಗೆ ಹಿಂತಿರುಗಿಸಬೇಕು. ಈ ಸಮಸ್ಯೆ ಪರಿಹರಿಸದಿದ್ದರೆ ಮುಂಬರುವ ದಿನಗಳಲ್ಲಿ ಬೆಳಗಾವಿಯ ಸಕ್ಕರೆ ಆಯುಕ್ತರ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸುವುದು'' ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಸಂದೀಪ ಕುಮಾರ ಬೂಬಾಟಿ ಎಚ್ಚರಿಕೆ ನೀಡಿದ್ದಾರೆ.

ಕಬ್ಬು ಬೆಳೆಗಾರರ ಹೋರಾಟ: ಕಬ್ಬು ಕಟಾವು ಹಾಗೂ ಸಾಗಾಣಿಗೆ ಹೆಚ್ಚುವರಿ ವೆಚ್ಚ ಪಡೆಯುವುದನ್ನು ವಿರೋಧಿಸಿ ಕಬ್ಬು ಬೆಳೆಗಾರರು, ಹಳಿಯಾಳ ಮಾತ್ರವಲ್ಲದೇ ಧಾರವಾಡ ಹಾಗೂ ಬೆಂಗಳೂರಿನಲ್ಲೂ ಪ್ರತಿಭಟಿಸಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಿದ್ದರು. ಆಗ ಕಬ್ಬು ಬೆಳೆಗಾರರೊಂದಿಗೆ ಮಾತನಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ರೈತರ ಬಾಕಿ ಹಣವನ್ನು ಕೊಡಿಸುವುದಾಗಿ ನೀಡಿದ್ದರು. ಆದ್ರೆ ಕೊಟ್ಟ ಭರವಸೆ ಇನ್ನೂ ಈಡೇರಿಲ್ಲ. ಇನ್ನೇನು ಕೆಲ ತಿಂಗಳಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಈ ಬಾರಿ ಕಬ್ಬು ಬೆಳೆಗಾರರ ಹೋರಾಟ ಹಳಿಯಾಳದಲ್ಲಿ ಸ್ಥಳೀಯ ರಾಜಕಾರಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.

ಶಾಸಕ ಸುನೀಲ್ ಹೆಗಡೆ ಪ್ರತಿಕ್ರಿಯೆ: ''ರಾಜ್ಯ ಸರ್ಕಾರ ಕಬ್ಬು ಬೆಳೆಗಾರರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ಕೆಲವೊಂದು ಸಂದರ್ಭಗಳಲ್ಲಿ ಆದ ಅಸಮಾಧಾನದಿಂದ ಚುನಾವಣೆಯಲ್ಲಿ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಲ್ಲ'' ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಪ್ರತಿಕ್ರಿಯೆ ನೀಡಿದ್ದಾರೆ.

ರೈತರು ತಮಗೆ ಬರಬೇಕಾದ ಬಾಕಿ ಹಣ ಒದಗಿಸಲು ಪಟ್ಟು ಹಿಡಿದಿದ್ದಾರೆ. ಸದ್ಯ ಸರ್ಕಾರಕ್ಕೆ ಒಂದು ತಿಂಗಳ ಗಡುವು ನೀಡಿರುವ ರೈತರು ಮುಂದಿನ ದಿನಗಳಲ್ಲಿ ಬೆಳಗಾವಿಯ ಸಕ್ಕರೆ ಆಯುಕ್ತರ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುವ ಖಡಕ್​ ಎಚ್ಚರಿಕೆ ಕೊಟ್ಟಿದ್ದಾರೆ. ರೈತರ ಹೋರಾಟವು ಮುಂದೆ ಯಾವ ತಿರುವು ಪಡೆದುಕೊಳ್ಳಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಇದನ್ನು ಓದಿ: ಜಾನುವಾರುಗಳಿಗೆ ಚರ್ಮಗಂಟು ರೋಗ: ಉಳವಿ ಚನ್ನಬಸವೇಶ್ವರ ಜಾತ್ರೆಯಲ್ಲಿ ಚಕ್ಕಡಿಗೆ ನಿರ್ಬಂಧ

Last Updated : Jan 27, 2023, 3:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.