ETV Bharat / state

ಅಕ್ರಮ ಸಾಗಣೆ: ಎರಡು ಲಾರಿ ಸಹಿತ 500 ಕ್ವಿಂಟಲ್ ಅಕ್ಕಿ ಜಪ್ತಿ - ಕಾರವಾರ

ಕಂಟೇನರ್ ಲಾರಿಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 500 ಕ್ವಿಂಟಲ್ ಅಕ್ಕಿಯನ್ನು ಜಪ್ತಿ ಮಾಡಿರುವ ಘಟನೆ ಹೊನ್ನಾವರದ ಆರೊಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ನಡೆದಿದೆ. ಇನ್ನು ಅಕ್ರಮ ಅಕ್ಕಿ ಸಾಗಣೆಯ ದೊಡ್ಡ ಜಾಲ ಹರಡಿದ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಹೊನ್ನಾವರ ಪೊಲೀಸರು ತನಿಖಾ ಕಾರ್ಯ ಚುರುಕುಗೊಳಿಸಿದ್ದಾರೆ.

illegal rice seized in Honnavar
ಅಕ್ರಮ ಸಾಗಣೆ: ಎರಡು ಲಾರಿ ಸಹಿತ 500 ಕ್ವಿಂಟಲ್ ಅಕ್ಕಿ ಜಪ್ತಿ
author img

By

Published : Nov 22, 2021, 7:30 AM IST

ಕಾರವಾರ: 2 ಕಂಟೇನರ್ ಲಾರಿಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 500 ಕ್ವಿಂಟಲ್ ಅಕ್ಕಿಯನ್ನು ಜಪ್ತಿ ಮಾಡಿರುವ ಘಟನೆ ಹೊನ್ನಾವರದ ಆರೊಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ನಡೆದಿದೆ.

500 quintal illegal rice seized in Honnavar
ಅಕ್ರಮ ಸಾಗಣೆ: ಎರಡು ಲಾರಿ ಸಹಿತ 500 ಕ್ವಿಂಟಲ್ ಅಕ್ಕಿ ಜಪ್ತಿ

ಹಾವೇರಿ ಜಿಲ್ಲೆಯ ಅಕ್ಕಿಆಲೂರು ಕಡೆಯಿಂದ ಮಂಗಳೂರು ಕಡೆಗೆ ಅಕ್ರಮವಾಗಿ ಅಕ್ಕಿ ಸಾಗಾಟ ಮಾಡಲಾಗುತ್ತಿತ್ತು. ಈ ವೇಳೆ, ತಪಾಸಣೆ ನಡೆಸಿ 500 ಕ್ವೀಂಟಲ್ ಅಕ್ಕಿ, ವಾಹನ ಸೇರಿದಂತೆ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಇದು ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿ ಎನ್ನುವ ಅನುಮಾನ ಹುಟ್ಟುಹಾಕಿದೆ. ತಹಶೀಲ್ದಾರ್​​ ಹಾಗೂ ಆಹಾರ ನಿರೀಕ್ಷಕರು ಮಾಹಿತಿ ಪಡೆದು ಪರಿಶೀಲನೆ ನಡೆಸಿದ್ದಾರೆ. ವಶಪಡಿಸಿಕೊಂಡ ಅಕ್ಕಿಯನ್ನು ಒಂದೊಂದೇ ಚೀಲದಂತೆ ತೂಕ ಮಾಡಿ ಕರ್ಕಿಯಲ್ಲಿರುವ ದಾಸ್ತಾನು ಮಳಿಗೆಯಲ್ಲಿ ಸಂಗ್ರಹ ಮಾಡಲಾಗಿದ್ದು, ರಾತ್ರಿಯೂ ಪರಿಶೀಲನೆ ನಡೆಸುತ್ತಿದ್ದಾರೆ.

ಅಕ್ರಮ ಅಕ್ಕಿ ಸಾಗಾಣಿಕೆಯ ದೊಡ್ಡ ಜಾಲ ಹರಡಿದ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಹೊನ್ನಾವರ ಪೊಲೀಸರು ತನಿಖಾ ಕಾರ್ಯ ಚುರುಕುಗೊಳಿಸಿದ್ದಾರೆ. ಯಾರಿಗೂ ಕಾಣದ ರೀತಿಯಲ್ಲಿ ದೊಡ್ಡ ಕಂಟೇನರ್ ವಾಹನದಲ್ಲಿ ಸಾಗಿಸುತ್ತಿರುವುದನ್ನು ನೋಡಿದರೆ ಇದು ಅನ್ನ ಭಾಗ್ಯ ಯೋಜನೆಯ ಪಡಿತರ ಅಕ್ಕಿ ಎನ್ನುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಪಠಾಣ್​ಕೋಟ್​ ಸೇನಾ ಗೇಟ್​ ಬಳಿ ಗ್ರೆನೇಡ್​​ ಸ್ಫೋಟ.. ಹೈ ಅಲರ್ಟ್​ ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.