ETV Bharat / state

ಬರೋಬ್ಬರಿ 300 ರಿಂದ 400 ಕೆ.ಜಿ ತೂಕದ ಬೃಹತ್ ಗಾತ್ರದ ಮೀನು ಬಲೆಗೆ!

author img

By

Published : Oct 29, 2020, 1:53 AM IST

ಭಟ್ಕಳದಲ್ಲಿ ಬೃಹತ್​​ ಗಾತ್ರದ ಮೀನು ಮೀನುಗಾರರ ಬಲೆಗೆ ಬಿದ್ದಿದ್ದು, ಅದರ ತೂಕ ಬರೋಬ್ಬರಿ 300ರಿಂದ 400 ಕೆ.ಜಿ ಇದೆ ಎಂದು ಅಂದಾಜಿಸಲಾಗಿದೆ.

300 kg fish catches in bhatka
300 kg fish catches in bhatka

ಭಟ್ಕಳ : ತಾಲೂಕಿನ ಬಂದರಿನಲ್ಲಿ ಬುಧವಾರ ಬೃಹತ್ ಗಾತ್ರದ ಮೀನು ಮೀನುಗಾರರ ಬಲೆಗೆ ಬಿದ್ದಿರುವ ಘಟನೆ ನಡೆದಿದೆ. ಮೀನುಗಾರಿಕೆಗೆ ತೆರಳಿದ ರಾಧಾಕೃಷ್ಣ, ರಾಜಶ್ರೀ, ಜಯದುರ್ಗ ಗಣೇಶ ಬೋಟುಗಳಿಗೆ ಬೃಹತ್​​ ಗಾತ್ರದ ತೊರ್ಕೆ ಮೀನು ದೊರಕಿದೆ.

ಬೃಹತ್​ ಗಾತ್ರದ ಮೀನು ಬಲೆಗೆ

ಮೀನು ಅಂದಾಜು 300 ರಿಂದ 400 ಕೆ.ಜಿ ತೂಕವಿದೆ. ಸುಮಾರು 2 ಮೀಟರ್ ಉದ್ದದ ಮೀನು ಇದಾಗಿದ್ದು, ಬೃಹತ್​ ಕ್ರೆನ್​​ನ ಸಹಾಯದಿಂದ ಮೇಲಕ್ಕೆತ್ತಲಾಗಿದೆ.

ಸಾಮಾನ್ಯವಾಗಿ ಮೀನುಗಾರರ ಬಲೆಗೆ ಬೀಳುವ ಮೀನುಗಳು 50 ರಿಂದ 100 ಕೆ.ಜಿ ತೂಕ ಹೊಂದಿರುತ್ತದೆ. ಅಪರೂಪಕ್ಕೊಮ್ಮೆ ಇಂತಹ ಬೃಹತ್ ಮೀನು ಬಲೆಗೆ ಬೀಳುತ್ತದೆ. ವೈಜ್ಞಾನಿಕವಾಗಿ ರೇ ಫೀಶ್, ಮೆಂಟ್ ರೇ ಎಂದು ಕರೆಯಲ್ಪಡುವ ಈ ಮೀನು ಸಂಪೂರ್ಣ ಬೆಳವಣಿಗೆಯ ನಂತರ ಸುಮಾರು ನಾಲ್ಕು ಸಾವಿರ ಪೌಂಡ್ ತೂಕ ಹೊಂದಿರುತ್ತದೆ. ಮೀನುಗಾರರು ಪ್ರಯಾಸಪಟ್ಟು ಈ ಮೀನನ್ನು ದಡಕ್ಕೆ ತಂದಿದ್ದು, ಕ್ರೆನ್ ಸಹಾಯದಿಂದ ಮೇಲಕ್ಕೆ ತರಲಾಗಿದೆ.

ಬೃಹತ್ ಗಾತ್ರದ ಮೀನನ್ನು ನೋಡಲು ಅಕ್ಕ ಪಕ್ಕದ ನೂರಾರು ಜನರು ಮುಗಿ ಬಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.