ETV Bharat / state

ಅಕ್ರಮ ಮೀನುಗಾರಿಕೆ ವೇಳೆ ಸ್ಫೋಟ; ಮೂವರಿಗೆ ಗಂಭೀರ ಗಾಯ - ಮೂವರು ಗಂಭೀರವಾಗಿ ಗಾಯ

ಜಿಲೆಟಿನ್​ ಕಡ್ಡಿ ಹಾಗೂ ಇನ್ನಿತರ ರಾಸಾಯನಿಕ ಬಳಸಿ ಅಕ್ರಮ ಮೀನುಗಾರಿಕೆ ಮಾಡುತ್ತಿರುವಾಗ ಸ್ಫೋಟ ಸಂಭವಿದ್ದರಿಂದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

3 people seriously injured due to blast while doing illegal fishing
ಅಕ್ರಮ ಮೀನುಗಾರಿಕೆ ವೇಳೆ ಸ್ಫೋಟ; ಮೂವರಿಗೆ ಗಂಭೀರ ಗಾಯ
author img

By

Published : Apr 2, 2020, 11:58 AM IST

ಕಾರವಾರ: ಅಕ್ರಮವಾಗಿ ಮೀನು ಹಿಡಿಯುವಾಗ ರಾಸಾಯನಿಕ ಸ್ಫೋಟಗೊಂಡಿದ್ದರಿಂದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕುಮಟಾ ತಾಲೂಕಿನ ಸಂತೆಗುಳಿ ಬಳಿ ಅಘನಾಶಿನಿ ನದಿಯಲ್ಲಿ ನಡೆದಿದೆ.

ಸಂತೆಗುಳಿ ನಿವಾಸಿ ಬುಡಾನ್ ಗಫಾರ್ ಶೇಖ್ ಮೊಹಮ್ಮದ್, ಆಸಾದ ಬುಡಾನ್ ಶೇಖ್, ಬಗಣೆ ನಿವಾಸಿ ಅಣ್ಣಪ್ಪ ಧಾಕು ಮರಾಠಿ ಗಂಭೀರ ಗಾಯಗೊಂಡಿದ್ದಾರೆ. ತಡರಾತ್ರಿ ಅಘನಾಶಿನಿ ನದಿಯಲ್ಲಿ ಜಿಲೆಟಿನ್ ಕಡ್ಡಿ ಹಾಗೂ ಇನ್ನಿತರ ರಾಸಾಯನಿಕ ಬಳಸಿ ಮೀನುಗಾರಿಕೆ ಮಾಡುತ್ತಿದ್ದಾಗ ಸ್ಫೋಟ ಸಂಭವಿಸಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ತಕ್ಷಣ ಕುಮಟಾ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎಜೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.