ETV Bharat / state

ಹದಗೆಟ್ಟ ರಸ್ತೆ: ಇಲ್ಲಿ ಸಂಚರಿಸಿದರೆ ಜನರಿಗೆ ಪ್ರಸವವೇದನೆ.. ಉಡುಪಿಯಲ್ಲಿ ಅಣುಕು ಪ್ರದರ್ಶನದೊಂದಿಗೆ ಪ್ರತಿಭಟನೆ

author img

By

Published : Nov 27, 2022, 4:26 PM IST

ಇಂದ್ರಾಳಿ ಸೇತುವೆಯಿಂದ ರೈಲ್ವೆ ನಿಲ್ದಾಣದವರೆಗಿನ ಹದಗೆಟ್ಟಿರುವ ರಸ್ತೆ ವಿರುದ್ಧ, ಆ್ಯಂಬುಲೆನ್ಸ್​ನಲ್ಲಿ ಗರ್ಭಿಣಿ ಸ್ತ್ರೀಯೊಬ್ಬರು ಹದಗೆಟ್ಟಿರುವ ರಸ್ತೆಯಲ್ಲಿ ಸಂಚರಿಸಿ ಹೆರಿಗೆಯಾಗುವ ಅಣುಕು ಪ್ರದರ್ಶನವನ್ನು ಮಾಡುವ ಮೂಲಕ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಪ್ರತಿಭಟನೆ ನಡೆಸಿದೆ.

unique-protest-against-road-problem-in-udupi
ಈ ರಸ್ತೆಯಲ್ಲಿ ಬಂದರೆ ಮಾರ್ಗ ಮಧ್ಯೆಯೇ ಹೆರಿಗೆ ಆಗುತ್ತೆ : ಅಣುಕು ಪ್ರದರ್ಶನದೊಂದಿಗೆ ವಿನೂತನ ಪ್ರತಿಭಟನೆ

ಉಡುಪಿ : ನಗರದ ಇಂದ್ರಾಳಿ ಸೇತುವೆಯಿಂದ ರೈಲ್ವೆ ನಿಲ್ದಾಣದವರೆಗಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಜನ ಸಾಮಾನ್ಯರು ಪರದಾಡುವಂತಾಗಿದೆ. ಕಳೆದ ಎರಡು ವರ್ಷಗಳಿಂದ ರಸ್ತೆ ಹದಗೆಟ್ಟಿದ್ದು, ಈ ಬಗ್ಗೆ ನಗರಸಭೆ ಮತ್ತು ಶಾಸಕರಿಗೆ ಹಲವು ಬಾರಿ ಮನವಿ ನೀಡಿದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಸಮಾಜ ಸೇವಕ ನಿತ್ಯಾನಂದ ಒಳಕಾಡು ಹೇಳಿದ್ದಾರೆ.

ಈ ಬಗ್ಗೆ ನಿತ್ಯಾನಂದ ಒಳಕಾಡು ಅವರು ರಸ್ತೆ ದುರವಸ್ಥೆ ಬಗ್ಗೆ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿನಿತ್ಯ ಜನಸಾಮಾನ್ಯರು ಅನುಭವಿಸುವ ಸಮಸ್ಯೆಯನ್ನು ಅಣಕು ಪ್ರದರ್ಶನದ ಮೂಲಕ ಸರ್ಕಾರದ ಗಮನಕ್ಕೆ ತರಲು ಮುಂದಾಗಿದ್ದಾರೆ. ಆಂಬ್ಯುಲೆನ್ಸ್​ನಲ್ಲಿ ಗರ್ಭಿಣಿ ಸ್ತ್ರೀಯೊಬ್ಬರು ಹದಗೆಟ್ಟಿರುವ ರಸ್ತೆಯಲ್ಲಿ ಸಂಚರಿಸಿ ಹೆರಿಗೆಯಾಗುವ ಅಣುಕು ಪ್ರದರ್ಶನವನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಮಾಡಿದೆ. ಈ ಅಣಕು ಪ್ರದರ್ಶನದಲ್ಲಿ ರಾಜು ಮತ್ತು ಹರೀಶ್ ಎಂಬವರು ಭಾಗಿಯಾಗಿದ್ದರು. ನಿತ್ಯಾನಂದ ಒಳಕಾಡು ಅವರ ಪ್ರತಿಭಟನೆಗೆ ರೈಲು ನಿಲ್ದಾಣದ ಆಟೋ ಚಾಲಕರು ಮತ್ತು ಟ್ಯಾಕ್ಸಿಮನ್ ಅಸೋಶಿಯೇಷನ್ ಬೆಂಬಲ ವ್ಯಕ್ತಪಡಿಸಿತ್ತು.

ಉಡುಪಿಯಲ್ಲಿ ಅಣುಕು ಪ್ರದರ್ಶನದೊಂದಿಗೆ ಪ್ರತಿಭಟನೆ

ಇನ್ನು, ಇಂದ್ರಾಳಿ ರೈಲ್ವೆ ಸ್ಟೇಷನ್ ರಸ್ತೆಯನ್ನು ಕೂಡಲೇ ದುರಸ್ತಿ ಮಾಡಬೇಕು. ರೈಲಿನ ಮೂಲಕ ಮಣಿಪಾಲಕ್ಕೆ ಸಾವಿರಾರು ರೋಗಿಗಳು ಬರುತ್ತಾರೆ. ಅನೇಕ ವಯೋವೃದ್ಧರು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಡಲು ಇಲ್ಲಿಗೆ ಬರುತ್ತಾರೆ. ಸಾವಿರಾರು ಸಂಖ್ಯೆಯ ಪ್ರವಾಸಿಗರು ಉಡುಪಿ ಜಿಲ್ಲೆಗೆ ರೈಲಿನ ಮೂಲಕ ಆಗಮಿಸುತ್ತಾರೆ. ಇನ್ನು, ಒಂದು ಕೋಟಿ ರೂಪಾಯಿ ಕಾಂಕ್ರೀಟ್ ರಸ್ತೆಗೆ ಮಂಜೂರಾಗಿದ್ದರೆ ಬೇಗ ಕಾಮಗಾರಿ ಆರಂಭಿಸಿ ಎಂದು ನಿತ್ಯಾನಂದ ಒಳಕಾಡು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಟ್ಯಾಕ್ಸಿ ಮೆನ್ ಅಸೋಶಿಯೇಷನ್​ ಅಧ್ಯಕ್ಷ ವಲೇರಿಯನ್, ಆಟೋ ಚಾಲಕರ ಅಧ್ಯಕ್ಷ ಅಬ್ದುಲ್ ಖಾದರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ : ಚಾಲಕನ ನಿಯಂತ್ರಣ ತಪ್ಪಿ ಕೆಎಸ್​ಆರ್​ಟಿಸಿ ಬಸ್​ ಅಪಘಾತ.. ಮೂವರ ಸ್ಥಿತಿ ಗಂಭೀರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.