ಉಡುಪಿ: ಜಿಲ್ಲೆಯ ಅಲೆವೂರಿನಲ್ಲಿ ಪ್ರತಿ ವರ್ಷ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಅಲೆವೂರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಈ ಬಾರಿ ಕೋವಿಡ್ ನಿಯಮಾವಳಿಗಳ ಕಾರಣಕ್ಕೆ, ಸರಳ ಚೌತಿ ಆಚರಣೆಗೆ ನಿರ್ಧರಿಸಿದೆ.
ಸರಳತೆ ಹೊರತಾಗಿಯೂ ಅಲೆವೂರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅದ್ದೂರಿಯಾಗಿ ಹಬ್ಬ ಆಚರಿಸುವುದಕ್ಕೆ ಈ ಬಾರಿ ಒಂದು ಕಾರಣವಿದೆ. ಅಲೆವೂರು ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಈ ಬಾರಿ ಇಷ್ಟ ಗಣಪನಿಗೆ ಊರಿನ ಜನರೆಲ್ಲಾ ಸೇರಿ ಚಿನ್ನದ ಕವಚ ತೊಡಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ: ಕೋವಿಡ್ ಮಾರ್ಗಸೂಚಿ ಅನುಸರಿಸಿ ಗಣೇಶ ಹಬ್ಬ ಆಚರಣೆ.. ಯಾವ್ಯಾವ ರಾಜ್ಯಗಳಲ್ಲಿ ಏನೆಲ್ಲಾ ಕ್ರಮ?
ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಸಿದ್ಧಪಡಿಸಿರುವ ಈ ಕವಚವನ್ನು ಇಂದು ಗಣಪನಿಗೆ ಸಮರ್ಪಿಸಲಾಗುತ್ತದೆ. ಈ ಮೂಲಕ ಅಲೆವೂರು ಗಣಪನ ಮೆರಗು ಮತ್ತಷ್ಟು ಹೆಚ್ಚಲಿದೆ. ಸಿಂಪಲ್ ಗಣೇಶೋತ್ಸವ ಜೊತೆಗೆ ಚಿನ್ನದ ಗಣಪನ ಅಲಂಕಾರ ಉತ್ಸವಕ್ಕೆ ನಾಂದಿ ಹಾಡಲಿದೆ.