ಉಡುಪಿ: ಜಿಲ್ಲಾ ಕಾಂಗ್ರೆಸ್ನಲ್ಲಿ ಬಣ ರಾಜಕೀಯ ಕಿತ್ತಾಟ ತಾರಕಕ್ಕೇರಿದ್ದು, ಮಾಜಿ ಶಾಸಕ ಯು. ಆರ್. ಸಭಾಪತಿ ಮತ್ತು ಮಾಜಿ ಸಚಿವ ಪ್ರಮೋದ್ ಮಧುರಾಜ್ ಬಣ್ಣದ ನಡುವೆ ವಾಗ್ವಾದ ನಡೆದಿದೆ.
ಪಕ್ಷದ ಕಾರ್ಯಧ್ಯಕ್ಷ ಸಲೀಂ ಅಹ್ಮದ್ ಮುಂದೆ ಮಾತಿನ ಚಕಮಕಿ :
ಕಾಂಗ್ರೆಸ್ ಪಕ್ಷದ ಬ್ಯಾನರ್ನಲ್ಲಿ ಪ್ರಮೋದ್ ಮಧುರಾಜ್ ಫೋಟೋ ಇಲ್ಲದೆ ಇರುವುದು ಪ್ರಮೋದ್ ಅವರ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಯಿತು. ಬಳಿಕ ಪ್ರಮೋದ್ ಹೆಸರಿನಲ್ಲಿ ಪ್ರತ್ಯೇಕ ಬ್ಯಾನರ್ ಹಾಕಿ ಪ್ರತ್ಯುತ್ತರ ನೀಡಿದರು.
ಕಾಂಗ್ರೆಸ್ ಕಚೇರಿ ಆವರಣದಲ್ಲಿ ಮಾತಿನ ಚಕಮಕಿ ನಡೆಸಿದ ಕಾರ್ಯಕರ್ತರು, ಸಭಾಪತಿ ವಿರುದ್ಧ ಆಕ್ರೋಶ ಹೊರ ಹಾಕಿದರು. ಕಾರ್ಯಧ್ಯಕ್ಷ ಸಲೀಂ ಅವರಿಂದ ಸಂಧಾನ ಪ್ರಕ್ರಿಯೆ ಕೂಡಾ ನಡೆಯಿತು.