ETV Bharat / state

ಕೋವಿಡ್​ ಲಸಿಕೆಯ 2ನೇ ಡೋಸ್ ಪಡೆದ ಉಡುಪಿ ಜಿಲ್ಲಾಧಿಕಾರಿ - udupi dc G. Jagadish got corona vaccination second dose

ಮೊದಲನೇ ವ್ಯಾಕ್ಸಿನ್ ಪಡೆದು 28 ದಿನವಾದರೂ ಕೆಲವು ಫ್ರಂಟ್​ಲೈನ್​ ವಾರಿಯರ್ಸ್ 2ನೇ ಡೋಸ್ ಪಡೆಯದೇ ಇರುವುದು ಗಮನಕ್ಕೆ ಬಂದಿರುತ್ತದೆ. 2ನೇ ಲಸಿಕೆ ಹಾಕಿಸಿಕೊಳ್ಳದೆ ಇದ್ದರೆ ಮೊದಲ ಲಸಿಕೆ ಹಾಕಿಸಿಕೊಂಡರೂ ಪ್ರಯೋಜನವಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

udupi-dc-got-corona-vaccination-second-dose
ಜಿಲ್ಲಾಧಿಕಾರಿ ಜಿ. ಜಗದೀಶ್
author img

By

Published : Mar 16, 2021, 8:16 PM IST

ಉಡುಪಿ: ಮೊದಲನೇ ವ್ಯಾಕ್ಸಿನ್ ಪಡೆದು ಸರಿಯಾಗಿ 28ನೇ ದಿನಕ್ಕೆ ಜಿಲ್ಲಾಧಿಕಾರಿ ಜಿ.ಜಗದೀಶ್ ಕೋವಿಶೀಲ್ಡ್ ಲಸಿಕೆಯ 2ನೇ ಡೋಸ್ ಹಾಕಿಸಿಕೊಂಡಿದ್ದಾರೆ.

ಜಿಲ್ಲಾಧಿಕಾರಿ ಜಿ.ಜಗದೀಶ್

ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರ ಜೊತೆಯಲ್ಲಿ ಬಂದ ಜಿಲ್ಲಾಧಿಕಾರಿ, ಚುಚ್ಚುಮದ್ದು ಹಾಕಿಸಿಕೊಂಡರು. ನಂತರ ವ್ಯಾಕ್ಸಿನ್​ ಕುರಿತು ಮಾತನಾಡಿದ ಅವರು, ಲಸಿಕೆ ಪಡೆಯುವ ವಿಚಾರದಲ್ಲಿ ಹಿರಿಯ ನಾಗರಿಕರ ಸ್ಪಂದನೆ ತುಂಬಾ ಚೆನ್ನಾಗಿದೆ. ಮತ್ತಷ್ಟು ಹಿರಿಯ ನಾಗರಿಕರು ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಅವರ ಮಕ್ಕಳು ಅನುವು ಮಾಡಿಕೊಡಬೇಕು ಎಂದರು.

ಓದಿ: ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಮಹಿಳಾ ಹಮಾಲರಿಂದ ಪ್ರತಿಭಟನೆ

ಮೊದಲನೇ ವ್ಯಾಕ್ಸಿನ್ ಪಡೆದು 28 ದಿನವಾದರೂ ಕೆಲವು ಫ್ರಂಟ್​ಲೈನ್​ ವಾರಿಯರ್ಸ್ 2ನೇ ಡೋಸ್ ಪಡೆಯದೇ ಇರುವುದು ಗಮನಕ್ಕೆ ಬಂದಿರುತ್ತದೆ. 2ನೇ ಲಸಿಕೆ ಹಾಕಿಸಿಕೊಳ್ಳದೆ ಇದ್ದರೆ ಮೊದಲ ಲಸಿಕೆ ಹಾಕಿಸಿಕೊಂಡರೂ ಪ್ರಯೋಜನವಿಲ್ಲ. ಹಾಗಾಗಿ, ವಾರಿಯರ್ಸ್ ಮುಂದೆ ಬಂದು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಸೂಚಿಸಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.