ಉಡುಪಿ: ನಿಟ್ಟೂರು-ಹನುಮಂತ ನಗರದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಮಳೆ ನೀರು ಹರಿಯುತ್ತಿದ್ದ ಚರಂಡಿಗೆ ಬಿದ್ದು ಮೃತಪಟ್ಟಿದ್ದಾರೆ.
ಅಂಬಾಗಿಲು ಪುತ್ತೂರು ಗ್ರಾಮದ ಕಕ್ಕುಂಜೆ ನಿವಾಸಿ ಗುಲಾಬಿ (60) ಮೃತಪಟ್ಟವರು. ಆಕಸ್ಮಿಕವಾಗಿ ಕಾಲು ಜಾರಿ ಮಳೆ ನೀರು ತುಂಬಿ ಹರಿಯುತ್ತಿದ್ದ ರಸ್ತೆ ಬದಿಯ ಚರಂಡಿಗೆ ಬಿದ್ದು, ನೀರಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.
ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಮುರೂರು ಎಂಬಲ್ಲಿ ಮಳೆ ಗಾಳಿಗೆ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಸೂರಮ್ಮ ಪೂಜಾರ್ತಿ (66) ಮೃತ ಮಹಿಳೆ.
ಕೃಷಿ ಕೆಲಸ ಮಾಡಲು ಹೋಗಿ ಬರುವಾಗ ಹೊಳೆ ನೀರಿಗೆ ಸಿಲುಕಿ ಸಾವು ಸಂಭವಿಸಿದೆ. ಹೊಳೆ ದಾಟುವಾಗ ಹರಿಯುವ ನೀರಿನ ಸೆಳೆತಕ್ಕೆ ಸಿಲುಕಿ ಮಹಿಳೆ ಸಾವನ್ನಪ್ಪಿದ್ದಾಳೆ.
ಕಳೆದ ಮೂರು ತಿಂಗಳಿಂದ ಮಳೆಗೆ ಒಟ್ಟು ಉಡುಪಿಯಲ್ಲಿ ಐದು ಮಂದಿ ಬಲಿಯಾಗಿದ್ದಾರೆ.