ದೇಶದ್ರೋಹಿ ಚಟುವಟಿಕೆ ನಡೆಸುವವರು ರೈತರನ್ನು ಲೀಡ್ ಮಾಡುತ್ತಿದ್ದಾರೆ; ಶೋಭಾ ಕಿಡಿ - shobha karandlaje reaction on farmers protest
ರೈತರಿಗೆ ಏನೇ ಸಮಸ್ಯೆ ಇದ್ದರೂ ಅದನ್ನು ಪಾರ್ಲಿಮೆಂಟ್ನಲ್ಲಿ ತಿದ್ದುಪಡಿ ಮಾಡಲು ಅವಕಾಶ ಇದೆ. ರೈತರನ್ನು ಅರ್ಬನ್ ನಕ್ಸಲರು ದಾರಿ ತಪ್ಪಿಸುತ್ತಿದ್ದಾರೆ. ಇದನ್ನು ಕೇಂದ್ರ ಸರ್ಕಾರ ಗಮನಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
![ದೇಶದ್ರೋಹಿ ಚಟುವಟಿಕೆ ನಡೆಸುವವರು ರೈತರನ್ನು ಲೀಡ್ ಮಾಡುತ್ತಿದ್ದಾರೆ; ಶೋಭಾ ಕಿಡಿ shobha karandlaje](https://etvbharatimages.akamaized.net/etvbharat/prod-images/768-512-10222476-thumbnail-3x2-udupi.jpg?imwidth=3840)
ಉಡುಪಿ: ರೈತನಿಗೆ ಉಮರ್ ಖಾಲಿದ್ಗೆ ಏನು ಸಂಬಂಧ. ಜೆಎನ್ಯು ನಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿದ್ದ ಉಮರ್ ಖಾಲಿದ್ನ ಬಂಧನವಾಗಿದೆ. ಖಾಲಿದ್ ಬಿಡುಗಡೆಗೆ ಬೇಡಿಕೆ ಇಡುತ್ತಾರೆಂದರೆ ಅವರನ್ನು ಮುನ್ನಡೆಸುತ್ತಿರುವವರು ಯಾರು ಎಂದು ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಸುಪ್ರೀಂಕೋರ್ಟ್ ರೈತ ವಿರೋಧಿ ಕಾಯ್ದೆಗಳನ್ನು ರದ್ದು ಮಾಡಬೇಕು: ಸಚಿನ್ ಮೀಗಾ ಮನವಿ
ಉಡುಪಿಯಲ್ಲಿ ಮಾತನಾಡಿದ ಅವರು, ಅರ್ಬನ್ ನಕ್ಸಲರು, ದೇಶದ್ರೋಹಿ ಚಟುವಟಿಕೆ ನಡೆಸುವವರು ರೈತರನ್ನು ಲೀಡ್ ಮಾಡುತ್ತಿದ್ದಾರೆಂದು ಹೇಳಿದರು. ರೈತರಿಗೆ ಏನೇ ಸಮಸ್ಯೆ ಇದ್ದರೂ ಅದನ್ನು ಪಾರ್ಲಿಮೆಂಟ್ನಲ್ಲಿ ತಿದ್ದುಪಡಿ ಮಾಡಲು ಅವಕಾಶ ಇದೆ. ರೈತರನ್ನು ಅರ್ಬನ್ ನಕ್ಸಲರು ದಾರಿ ತಪ್ಪಿಸುತ್ತಿದ್ದಾರೆ. ಇದನ್ನು ಕೇಂದ್ರ ಸರ್ಕಾರ ಗಮನಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.