ETV Bharat / state

ಬಜರಂಗದಳ ಸಂಚಾಲಕ ಸುಧೀರ್ ಸೋನಾ ಮನೆಗೆ ಬಂದ ಅಪರಿಚಿತರು: ದೂರು - Sudhir Sona complained to the police station

ಬಜರಂಗದಳದ ಸಂಚಾಲಕ ಸುಧೀರ್ ಸೋನಾ ಅವರ ಮನೆಗೆ ಅಪರಿಚಿತರು ಬಂದು ಕರೆದಿದ್ದು, ಅವರಲ್ಲಿದ್ದ ಆಯುಧಗಳನ್ನು ಗಮನಿಸಿರುವ ಅವರು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

Bajarangadal impresario Sudheer Sona
ಬಜರಂಗದಳ ಸಂಚಾಲಕ ಸುಧೀರ್ ಸೋನಾ
author img

By

Published : Aug 1, 2022, 9:57 AM IST

ಕಾಪು(ಉಡುಪಿ): ಬಜರಂಗದಳದ ಸಂಚಾಲಕ ಸುಧೀರ್ ಸೋನಾ ಅವರು ಬಚಾವ್ ಆದ ಘಟನೆ ಇಂದು ಕಾಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಂದು ಬೆಳಗ್ಗೆ ಸುಧೀರ್ ಸೋನಾ ಅವರ ಮನೆಗೆ ಬಂದ ಇಬ್ಬರು ಅಪರಿಚಿತರು ನಿಮ್ಮ ಹತ್ತಿರ ಮಾತನಾಡಬೇಕೆಂದು ಕಾರಿನಲ್ಲಿ ಕಾಯುತ್ತಿದ್ದಾರೆ ಬನ್ನಿ ಎಂದು ಕರೆದಿದ್ದಾರೆ.

ಕರೆಯಲು ಬಂದ ಇಬ್ಬರು ಅಪರಿಚಿತ ಯುವಕರ ಚಲನವಲನಗಳಿಂದ ಅನುಮಾನಗೊಂಡ ಸುಧೀರ್ ಸೋನಾ ಮತ್ತು ಅವರ ಪತ್ನಿ ಬರುವುದಿಲ್ಲ ಎಂದು ಹೇಳಿ ಕಳುಹಿಸಿದರು. ಆ ಅಪರಿಚಿತರು ಹೋಗುವಾಗ ಅವರ ಬಳಿ ಇದ್ದ ಆಯುಧಗಳನ್ನು ಗಮನಿಸಿದ ಸುಧೀರ್ ಸೋನಾ ಅವರು ಕೂಡಲೇ ಕಾಪು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.

ಬಜರಂಗದಳ ಸಂಚಾಲಕ ಸುಧೀರ್ ಸೋನಾ ಮಾಧ್ಯಮದೊಂದಿಗೆ ಮಾತನಾಡಿದರು.

ದೂರು ಸ್ವೀಕರಿಸಿದ ಪೊಲೀಸರು ಸುಧೀರ್ ಅವರಿಗೆ ಧೈರ್ಯ ತುಂಬಿದರು. ನಂತರ ಕಾರ್ಯಪ್ರವತ್ತರಾದ ಕಾಪು ಪೊಲೀಸರು ಆಸಿಫ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಫಾಝಿಲ್ ಹತ್ಯೆ ಪ್ರಕರಣ: ಕೃತ್ಯಕ್ಕೆ ಬಳಸಿದ್ದ ಕಾರು ಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.