ಉಡುಪಿ : ಮಗನೇ ತನ್ನ ತಂದೆಯನ್ನು ಕೊಂದ ದಾರುಣ ಘಟನೆ ಕೋಟೇಶ್ವರ ಸಮೀಪದ ಗೋಪಾಡಿಯಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಗೋಪಾಡಿ ಗ್ರಾಮದ ಹಾಲಾಡಿ ನಿವಾಸಿ ನರಸಿಂಹ ಮರಕಾಲ (74) ಎಂದು ಗುರುತಿಸಲಾಗಿದೆ.
ಪುತ್ರ ರಾಘವೇಂದ್ರ (36) ಕೊಲೆಗೈದ ಆರೋಪಿ. ಕೌಟುಂಬಿಕ ದ್ವೇಷದ ಹಿನ್ನೆಲೆಯಲ್ಲಿ ಮಗ ರಾಘವೇಂದ್ರ ಕೊಡಲಿಯಿಂದ ತಂದೆಯನ್ನು ಕೊಚ್ಚಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.
ಸದ್ಯ ಸ್ಥಳಕ್ಕೆ ಕುಂದಾಪುರ ಠಾಣಾ ಪೊಲೀಸರು ಭೇಟಿ ನೀಡಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ.
ಓದಿ : ಪಾವಗಡ ಬಸ್ ದುರಂತ : ಮೃತರ ಕುಟುಂಬಗಳಿಗೆ ₹25 ಲಕ್ಷ ಪರಿಹಾರ ನೀಡಲು ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹ