ಉಡುಪಿ: ಶೀರೂರು ಮಠದ ನೂತನ ಉತ್ತರಾಧಿಕಾರಿಯಾಗಿ ನಿಯೋಜನೆಗೊಳ್ಳಲಿರುವ ಅನಿರುದ್ಧ ಸರಳತ್ತಾಯರು ಸಂನ್ಯಾಸ ದೀಕ್ಷೆಯನ್ನು ಶೀರೂರು ಮೂಲಮಠದಲ್ಲಿ ಸ್ವೀಕರಿಸಿದರು.
ಅದರ ಅಂಗವಾಗಿ ಶಾಕಲ ಹೋಮ, ವಿರಜಾ ಹೋಮ ಪ್ರೈಷೋಚ್ಚಾರಣೆ ಮೊದಲಾದ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು. ನಂತರ ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ನೂತನ ಯತಿಗಳಿಗೆ ಸಂನ್ಯಾಸ ಅಂಗವಾದ ಕಲಶಾಭಿಷೇಕವನ್ನು ನೆರವೇರಿಸಿ ಪ್ರಣವ ಮಂತ್ರೋಪದೇಶ ನೀಡಿದರು. ಭಾರಿ ವಿರೋಧದ ನಡುವೆಯೂ ಶ್ರೀಗಳ ಪಟ್ಟಾಭಿಷೇಕ ಕಾರ್ಯಕ್ರಮ ನಾಳೆ ಮೂಲ ಮಠದಲ್ಲಿ ನೆರವೇರಲಿದೆ.
![Shiruru New Sri Conversation](https://etvbharatimages.akamaized.net/etvbharat/prod-images/kn-udp-05-13-shirrorsanyasa-deekshe-7202200_13052021194618_1305f_1620915378_607.jpg)