ಉಡುಪಿ : ಮುಂಬೈ ಹೋಟೆಲ್ ಉದ್ಯಮಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದಲ್ಲಿ ನಡೆದಿದೆ.
ಕಾರ್ಕಳ ಹಿರ್ಗಾನದ ಕೃಷ್ಣ ಬೆಟ್ಟು ನಿವಾಸಿ ಸುನಿಲ್ ಶೆಟ್ಟಿ (45) ಎಂಬುವರು ಮೃತ ದುರ್ದೈವಿ. ಪೂನಾದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ ಸುನಿಲ್ ಶೆಟ್ಟಿ, ಮನೆಯಲ್ಲಿದ್ದ ನಾಡ ಕೋವಿಯಿಂದ ತಲೆಗೆ ಗುಂಡು ಸಿಡಿಸಿಕೊಂಡು ಸಾವನ್ನಪ್ಪಿದ್ದಾರೆ.
ವ್ಯಾಪಾರದಲ್ಲಿ ವಿಪರೀತ ನಷ್ಟ ಅನುಭವಿಸಿ ಖಿನ್ನತೆಗೊಳಗಾಗಿದ್ದ ಸುನಿಲ್ ಶೆಟ್ಟಿ, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.