ETV Bharat / state

ಪರಿಸರ ಸಂರಕ್ಷಣೆ ಹೆಸರಲ್ಲಿ ಹಣ ವಸೂಲಿ: ನಾಲ್ವರು ಅರೆಸ್ಟ್​​​ - ಲಾರಿ ಚಾಲಕ

ಸ್ಥಳೀಯರು ಮತ್ತು ಲಾರಿ ಮಾಲೀಕರ ದೂರಿನ ಮೇರೆಗೆ ಪರಿಸರ ಸಂರಕ್ಷಣೆ ನೆಪದಲ್ಲಿ ಲಾರಿ ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದ ನಾಲ್ವರನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.

ನಾಲ್ವರು ಅರೆಸ್ಟ್​
author img

By

Published : Apr 9, 2019, 5:04 PM IST

ಉಡುಪಿ: ನೆಲ ಜನ ಪರಿಸರ ಸಂರಕ್ಷಣಾ ವೇದಿಕೆಯ ಹೆಸರಿನಲ್ಲಿ ಪರಿಸರ ಸಂರಕ್ಷಣೆ ನೆಪದಲ್ಲಿ ಲಾರಿ ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದ ನಾಲ್ವರನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.

ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಗರಿಕೆಮಠ ಸಮೀಪದಲ್ಲಿ ಕಾರಿನಲ್ಲಿ ಬಂದ ನೆಲ, ಜಲ, ಪರಿಸರ ಸಂರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷೆ ಶ್ರೀಲತಾ ಶೆಟ್ಟಿ, ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ, ಜಿಲ್ಲಾಧ್ಯಕ್ಷ ನಿತ್ಯಾನಂದ ಮತ್ತು ಗುರುಪ್ರಸಾದ್ ಎನ್ನುವವರು ಕಲ್ಲು ಸಾಗಾಟ ಮಾಡುತ್ತಿದ್ದ ಲಾರಿಗಳನ್ನು ಅಡ್ಡಗಟ್ಟಿ ಹಣ ವಸೂಲಿ ಮಾಡುತ್ತಿದ್ದರು. ಹಣ ನೀಡದೆ ಇದ್ದರೆ ಗಾಡಿ ಸೀಜ್​ ಮಾಡುವ ಬೆದರಿಕೆ ಹಾಕಿ ಪ್ರತಿ ಲಾರಿಗಳಿಂದ ಎರಡು ಮೂರು ಸಾವಿರದಂತೆ ಸುಮಾರು 20 ಲಾರಿಗಳಿಂದ ಹಣ ವಸೂಲಿ ಮಾಡಿದ್ದರು.

ಪರಿಸರ ಸಂರಕ್ಷರಣೆ ಹೆಸರಲ್ಲಿ ಹಣ ವಸೂಲಿ

ಇವರ ಅನುಮಾನಾಸ್ಪದ ನಡೆಯನ್ನು ಗಮನಿಸಿದ ಸ್ಥಳೀಯರು ಮತ್ತು ಲಾರಿ ಮಾಲೀಕರು ಕೋಟ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳೀಯರು ಮತ್ತು ಲಾರಿ ಮಾಲೀಕರ ದೂರಿನ ಮೇರೆಗೆ ಹಣ ವಸೂಲಿ ಮಾಡಿದ ನಾಲ್ವರನ್ನು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.