ETV Bharat / state

ರಾಯಚೂರು ವೈದ್ಯರ ಅಮಾನತಿಗೆ ಸಚಿವ ಶ್ರೀರಾಮುಲು ಆದೇಶ

ಮೂರು ತಿಂಗಳ ಗರ್ಭಿಣಿಗೆ ಕೊರೊನಾ ಸೋಂಕು ತಗುಲಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ತೀವ್ರ ರಕ್ತಸ್ರಾವವಾಗಿದೆ. ಆದರೆ, ಈ ವೇಳೆ ವೈದ್ಯರು ತಕ್ಷಣ ಚಿಕಿತ್ಸೆ ನೀಡದ ಕಾರಣ ಗರ್ಭಪಾತವಾಗಿತ್ತು.

ಸಚಿವ ಶ್ರೀ ರಾಮುಲು
ಸಚಿವ ಶ್ರೀ ರಾಮುಲು
author img

By

Published : Jun 9, 2020, 4:18 PM IST

Updated : Jun 9, 2020, 7:53 PM IST

ಉಡುಪಿ : ರಾಯಚೂರಿನಲ್ಲಿ ಕೊರೊನಾ ಸೋಂಕಿತ ಮಹಿಳೆಗೆ ಗರ್ಭಪಾತವಾದ ವಿಚಾರವಾಗಿ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು, ಜಿಲ್ಲಾಡಳಿತ ಮತ್ತು ಡಿಹೆಚ್​ಒ ಜೊತೆ ಮಾತನಾಡಿದ್ದೇನೆ. ತಡವಾಗಿ ಚಿಕಿತ್ಸೆ ನೀಡಿದ ವೈದ್ಯರನ್ನು ತಕ್ಷಣ ಅಮಾನತು ಮಾಡಲು ಆದೇಶ ನೀಡಿದ್ದೇನೆ ಎಂದರು.

ರಕ್ತಸ್ರಾವದಿಂದ ಬಳಲುತ್ತಿದ್ದ ಕೊರೊನಾ ಸೋಂಕಿತ ಗರ್ಭಿಣಿಗೆ ಗರ್ಭಪಾತ

ಕೋವಿಡ್-19 ಬಂದಿರಲಿ, ಬಾರದಿರಲಿ ಅದು ಪ್ರಶ್ನೆಯೇ ಅಲ್ಲ. ತಡವಾಗಿ ಚಿಕಿತ್ಸೆ ನೀಡಿರುವುದು ದೊಡ್ಡ ತಪ್ಪು. ಈ ತರದ ಘಟನೆ ಮತ್ತೆ ಮರುಕಳಿಸಬಾರದೆಂದು ಸಸ್ಪೆಂಡ್ ಮಾಡಲಾಗಿದೆ ಎಂದು ಉಡುಪಿಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ರು.

Last Updated : Jun 9, 2020, 7:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.