ಉಡುಪಿ : ಮದ್ಯದ ನಶೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಕಾರನ್ನು ಹೊಂಡಕ್ಕೆ ಹಾಕಿ ಮೇಲಕ್ಕೆತ್ತಲಾಗದೆ ಅಲ್ಲೇ ಬಿಟ್ಟು ಕಾಲ್ಕಿತ್ತ ಘಟನೆ ಕಾರ್ಕಳದಲ್ಲಿ ನಡೆದಿದೆ.
ಕಾರ್ಕಳ ನಗರದ ಮಸೀದಿ ಪಕ್ಕದಲ್ಲಿರುವ ಆನೆಕೆರೆ ಕಾಲುವೆಯಲ್ಲಿ ಇಂದು ಬೆಳಗ್ಗೆ ಕೇರಳ ನೋಂದಾಯಿತ ಅಪರಿಚಿತ ವಾಹನವೊಂದು ಉರುಳಿಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸಾರ್ವಜನಿಕರು ಕಾರಿನೊಳಗೆ ಯಾರಾದ್ರೂ ಇದ್ದರಾ ಎಂದು ಪರಿಶೀಲಿಸಿದಾಗ, ಯಾರೂ ಪತ್ತೆಯಾಗಿರಲಿಲ್ಲ.
ಕೊನೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾರಿನ ದಾಖಲೆಗಳನ್ನು ಪರಿಶೀಲಿಸಿದಾಗ, ಈ ಕಾರು ಮಂಗಳೂರಿನ ಖಾಸಗಿ ವೈದ್ಯಕೀಯ ಕಾಲೇಜೊಂದರ ವಿದ್ಯಾರ್ಥಿಗಳಿಗೆ ಸೇರಿದ್ದು ಎಂದು ತಿಳಿದು ಬಂದಿದೆ.
ಓದಿ: ಲಾರಿ - ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ಇಬ್ಬರ ದುರ್ಮರಣ
ಶನಿವಾರ ಕಾರ್ಕಳದ ಹೋಟೆಲೊಂದರಲ್ಲಿ ವೀಕೆಂಡ್ ಪಾರ್ಟಿ ಮಾಡಿ ಮದ್ಯದ ನಶೆಯಲ್ಲಿ ಗಾಡಿಯನ್ನು ಹೊಂಡಕ್ಕೆ ಇಳಿಸಿದ ವಿದ್ಯಾರ್ಥಿಗಳು, ಮೇಲೆತ್ತಲಾಗದೆ ಅಲ್ಲೇ ಬಿಟ್ಟು ಹೋಗಿರುವುದು ಗೊತ್ತಾಗಿದೆ. ಅಪಘಾತದಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.