ಉಡುಪಿ: ಅರ್ಹತೆಗೆ ತಕ್ಕ ಉದ್ಯೋಗ ಸಿಗದ ಹಿನ್ನೆಲೆಯಲ್ಲಿ ತೀವ್ರವಾಗಿ ನೊಂದಿದ್ದ ಪದವೀಧರೆಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಂಬಿಎ ಪದವಿಧರೆ 23 ವರ್ಷ ವಯಸ್ಸಿನ ಸಹನಾ ವಿಷ ಸೇವಿಸಿ ಕಾಪು ತಾಲೂಕಿನ ಕಟ್ಟಿಂಗೇರಿ ಗ್ರಾಮದಲ್ಲಿ ಮೇ 9ರಂದು ಆತ್ಮಹತ್ಯೆಗೆ ಶರಣಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಮೂಲದ ಯುವತಿ ಇವರಾಗಿದ್ದು, ಉಡುಪಿ ಜಿಲ್ಲೆಯ ಕಟ್ಟಿಂಗೇರಿ ಗ್ರಾಮದಲ್ಲಿ ವಿಷ ಸೇವಿಸಿದ್ದರು. ಸಹನಾ ಕಟ್ಟಿಂಗೇರಿಯ ಅಕ್ಕನ ಮನೆಗೆ ಬಂದು ವಿಷ ಸೇವಿಸಿದ್ದರಿಂದ ಉಡುಪಿಯ ಮಿಷನ್ ಆಸ್ಪತ್ರೆ, ಕೆಎಂಸಿ, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸಹನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅರ್ಹತೆಗೆ ತಕ್ಕ ಉದ್ಯೋಗ ಸಿಗಲಿಲ್ಲ ಎಂದು ವಿಷ ಸೇವಿಸಿದ್ದ ಸಹನಾ ಒಂದು ವರ್ಷದ ಹಿಂದೆ ಮಂಗಳೂರಲ್ಲಿ ಎಂಬಿಎ ಮಾಡಿದ್ದರು. ಮೂರು ಆಸ್ಪತ್ರೆಗಳಲ್ಲಿ 10 ದಿನ ಚಿಕಿತ್ಸೆ ನೀಡಲಾಗಿತ್ತು. ಉಡುಪಿಯ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಕಾಂಗ್ರೆಸ್ ಪ್ರತಿಭಟನೆ: ಪದವಿಧರರಿಗೆ ಅರ್ಹತೆಗೆ ತಕ್ಕಂತೆ ಸೂಕ್ತ ಉದ್ಯೋಗಗಳು ದೊರೆಯುತ್ತಿಲ್ಲ. ಇದಕ್ಕೆ ರಾಜ್ಯ, ಕೇಂದ್ರ ಸರ್ಕಾರ ಹೊಣೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಇಂದು ಉಡುಪಿಯಲ್ಲಿ ಮೊಹಮ್ಮದ್ ನಲಪಾಡ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದೆ.
ಇದನ್ನೂ ಓದಿ.. ಉದ್ಘಾಟನೆಯಾಗಿ 2 ದಿನವಷ್ಟೇ.. ಸಮುದ್ರದ ಅಲೆಗಳ ರಭಸಕ್ಕೆ ಕಿತ್ಕೊಂಡ್ಹೋದ ರಾಜ್ಯದ ಪ್ರಥಮ ಫ್ಲೋಟಿಂಗ್ ಬ್ರಿಡ್ಜ್!