ಉಡುಪಿ: ಕೃಷ್ಣ ಮಠ ವಿಶೇಷ ಸಂಪ್ರದಾಯ, ಆಚರಣೆಗಳಿಗೆ ಹೆಸರುವಾಸಿ. ಅದರಲ್ಲೂ ಅಶ್ವಯುಜ ಮಾಸದ ಯೋಗ ನಿದ್ರೆಯಲ್ಲಿ ಇರುವ ಮಾಧವನನ್ನು ಎಚ್ಚರಿಸುವ, ಪಶ್ಚಿಮ ಜಾಗರಪೂಜೆ ಕಾಣ್ತುಂಬಿಕೊಳ್ಳುವುದೇ ಕಣ್ಣಿಗೆ ಹಬ್ಬ. ಹಣತೆಗಳ ಬೆಳಕಿನಿಂದ ಕೃಷ್ಣ ಸಾನಿಧ್ಯ ಕಂಗೊಳಿಸಿದ್ರೆ, ವಾದ್ಯಘೋಷಗಳು ಭಕ್ತರ ಮನಸ್ಸಿಗೆ ಮುದ ನೀಡುತ್ತಿವೆ.
ಪರ್ಯಾಯ ಅದಮಾರು ಮಠಾಧೀಶ ಈಶ ಪ್ರಿಯ ಶ್ರೀಗಳಿಂದ ಕೂರ್ಮಾರತಿ. ಯೋಗ ನಿದ್ರೆಯಲ್ಲಿರುವ ಮಾಧವನನ್ನು ಎಚ್ಚರಿಸುವ ವಿಶೇಷ ಪೂಜೆ. ಆಶ್ವಯುಜ ಶುದ್ಧ ಏಕಾದಶಿಯಿಂದ ಕಾರ್ತಿಕ ಮಾಸದ ಉತ್ಥಾನ ದ್ವಾದಶಿಯ ತನಕ ದೇವರನ್ನು ಯೋಗನಿದ್ರೆಯಿಂದ ಎಬ್ಬಿಸುವ ಸಂಭ್ರಮದ ಪಶ್ಚಿಮ ಜಾಗರಪೂಜೆ. ಉಡುಪಿ ಕೃಷ್ಣನಿಗೆ 16 ಬಗೆಯ ಪೂಜೆ ಮಾಡುತ್ತಾರೆ. ಆದರೆ ಎಲ್ಲಾ ಪೂಜೆಗಳಿಗೂ ಕಳಶವಿಟ್ಟಂತೆ ಈ ಪಶ್ಚಿಮ ಜಾಗರಪೂಜೆ ನಡೆಯುತ್ತೆ.
ನಿದ್ರೆಗೆ ಜಾರಿಗೆ ಶ್ರೀಕೃಷ್ಣನನ್ನು ಸುಪ್ರಭಾತ ಪೂಜೆಗಳಿಂದ ಎಬ್ಬಿಸುವ ಪರಿಯೇ ಅನನ್ಯ. ಈ ವೇಳೆ ಮಠದ ಆವರಣದಲ್ಲಿ ಅಪರೂಪದ ಸೂರ್ಯವಾದ್ಯವನ್ನು ಮೊಳಗಿಸಲಾಗುತ್ತದೆ. ಅಪರೂಪದ ವಾದ್ಯವನ್ನು ತಲೆಯ ಮೇಲೆ ಕಿರೀಟದಂತೆ ಧರಿಸಿ, ಅದನ್ನು ನುಡಿಸುವುದು ಒಂದು ವಿಶಿಷ್ಟ ಆಚರಣೆ. ಕಡಗೋಲು ಕೃಷ್ಣನ ವಿಶ್ವರೂಪ ದರ್ಶನ ಕಾಣಲು ಅದ್ಬುತವಾಗಿರುತ್ತೆ.
ಸೂರ್ಯೋದಯದ ಮುನ್ನ ಬ್ರಾಹ್ಮೀ ಮುಹೂರ್ತದಲ್ಲಿ ನಡೆಸುವ ಪೂಜೆಗಳಿಗೆ ಸಿಕ್ಕುವ ಫಲ ಹೆಚ್ಚು ಅನ್ನೋದು ಭಕ್ತರ ನಂಬಿಕೆ. ಉದಯಕಾಲದ ಈ ಪೂಜೆ ಕಂಡರೆ ದಿನವಿಡೀ ಉಲ್ಲಾಸ ಮನೆಮಾಡುತ್ತೆ ಅನ್ನೋದು ಅವರಲ್ಲಿನ ವಿಶ್ವಾಸ.
ಇದನ್ನೂ ಓದಿ: ದೇಶದಲ್ಲಿ ಹಿಂದೂಗಳ ರಕ್ಷಣೆಗೆ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ ಆಗ್ರಹ