ETV Bharat / state

ಫೋನ್ ಟ್ಯಾಪಿಂಗ್ ವಿಚಾರದಲ್ಲಿ ಯಾವುದೇ ತನಿಖೆ ಎದುರಿಸಲು ಸಿದ್ಧ: ಕುಮಾರಸ್ವಾಮಿ

ಫೋನ್ ಟ್ಯಾಪಿಂಗ್​ ವಿಚಾರದಲ್ಲಿ ಬೇರೆ ದೇಶಗಳಿಂದ ತನಿಖಾ ಸಂಸ್ಥೆಗಳನ್ನು ಕರೆಸಿ ತನಿಖೆ ನಡೆಸಲಿ. ಆದರೆ, ನನ್ನ ಹೋರಾಟವನ್ನು ನಿಲ್ಲಿಸಲು ಸಾಧ್ಯವಿಲ್ಲವೆಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ
author img

By

Published : Aug 18, 2019, 9:39 PM IST

ಉಡುಪಿ: ಫೋನ್ ಕದ್ದಾಲಿಕೆ ವಿಚಾರದಲ್ಲಿ ಯಾವುದೇ ರೀತಿಯ ತನಿಖೆಗೂ ಮುಕ್ತವಾಗಿದ್ದೇನೆ. ವೈಯಕ್ತಿಕವಾಗಿ ನನಗೆ ಯಾವುದೇ ಆತಂಕ ಇಲ್ಲ ಎಂದು ಮಾಜಿ ಸಿಎಂ‌ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ

ನಗರದಲ್ಲಿ ಸುದ್ಧಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಲಹೆ ಪಡೆದು, ಸಿಬಿಐ ತನಿಖೆಗೆ ತುರ್ತಾಗಿ ನಿರ್ಧರಿಸಿರುವ ಯಡಿಯೂರಪ್ಪನವರು, ಆಪರೇಷನ್ ಕಮಲದ ಹೆಸರಲ್ಲಿನ ಸೂಟ್ ಕೇಸ್ ವ್ಯಾಪಾರವನ್ನು ಸಹ ತನಿಖೆಗೆ ವಹಿಸಲಿ ಎಂದು ಆಗ್ರಹಿಸಿದರು.

ಅಲ್ಲದೆ, ಇದರ ಜತೆಗೆ ಹಿಂದಿನ 15 ವರ್ಷಗಳ ಎಲ್ಲಾ ಸರ್ಕಾರಗಳ ಅವಧಿಯಲ್ಲಿ ಏನಾಗಿದೆ ಎಂಬುದರ ಕುರಿತು ಸಿಬಿಐ ತನಿಖೆ ನಡೆಯಲಿ ಎಂದು ಕುಮಾರಸ್ವಾಮಿ ಹೇಳಿದರು. ಇನ್ನು ಅಮೆರಿಕ, ರಷ್ಯಾದಲ್ಲಿನ ಉನ್ನತ ಮಟ್ಟದ ತನಿಖಾ ಸಂಸ್ಥೆಗಳಿಂದಲೂ ತನಿಖೆ ನಡೆಸಲಿ. ನನ್ನ ಹೋರಾಟ ನಿಲ್ಲಿಸಲು ಸಾಧ್ಯವಿಲ್ಲವೆಂದು ಸರ್ಕಾರಕ್ಕೆ ಸವಾಲು ಹಾಕಿದರು.

Intro:ಉಡುಪಿ

ಫೊನ್ ಟ್ಯಾಪಿಂಗ್ ವಿಚಾರದಲ್ಲಿ ಯಾವುದೆರ ರೀತಿಯ ತನಿಖೆಗೆ ಮುಕ್ತವಾಗಿದೇನೆ: ಕುಮಾರಸ್ವಾಮಿ

ಉಡುಪಿ: ಫೊನ್ ಟ್ಯಾಪಿಂಗ್ ವಿಚಾರದಲ್ಲಿ ಯಾವುದೆರ ರೀತಿಯ ತನಿಖೆಗೆ ಮುಕ್ತವಾಗಿದ್ದೇನೆ .
ವೈಯ್ಯಕ್ತಿಕವಾಗಿ ನನಗೆ ಯಾವುದೇ ಆತಂಕ ಇಲ್ಲ ಅಂತಾ ಮಾಜಿ ಸಿಎಂ‌ ಕುಮಾರಸ್ವಾಮಿ ಹೇಳಿದ್ದಾರೆ.
ಉಡುಪಿ ಯಲ್ಲಿ ಸುದ್ಧಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು
ಕುಮಾರಸ್ವಾಮಿಯನ್ನು ಹತ್ತಿಕ್ಕಲು ಇದೊಂದು ಅಸ್ತ್ರ ಎಂದು ಕೆಲ ಆಯ್ದ ಮಾದ್ಯಮ ಗಳು ಹೇಳ್ತಿವೆ ಅಂತಾ ಖಾಸಗಿ ವಾಹಿನಿಗಳ ಸುದ್ದಿಯನ್ನು ಮಾಜಿ ಸಿಎಂ ತರಾಟೆಗೆ ತೆಗೆದುಕೊಂಡರು.

ಯಾವ ಅಸ್ತ್ರವೂ ಇಲ್ಲ, ಎಲ್ಲಾ ಅಸ್ತ್ತ ನಿಶ್ಯಸ್ತ್ರ ಆಗುತ್ತೆ.ಎಷ್ಟೇ ಪ್ರಯತ್ನ ಮಾಡಿದ್ರೂ ನಿಮಗೆ ಯಾವುದೇ ಫಲ ಸಿಗಲ್ಲ.ನಾನು ನನ್ನ ಆತ್ಮಸಾಕ್ಷಿಗೆ ಸರಿಯಾಗಿ ಕೆಲಸ ಮಾಡಿದವನು
ಕಳೆದ 14 ತಿಂಗಳ ಆಡಳಿತದಲ್ಲಿ ನಾನು ತಪ್ಪು ಮಾಡಿಲ್ಲ.ನಾನ್ಯಾಕೆ ಭಯ ಪಡಬೇಕು.ನಾನೇನೂ ಚೆಕ್ ಮುಖಾಂತರ ಹಣ ಪಡೆದಿಲ್ಲ, ರಾಜ್ಯ ಲೂಟಿ ಮಾಡಿಲ್ಲ ಅಂತಾ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ್ರು.

ಸಿದ್ದರಾಮಯ್ಯ ಸಲಹೆ ಪಡೆದು ಸಿಬಿಐಗೆ ಕೊಟ್ಟಿದ್ದಕ್ಕೆ ಯಡ್ಯೂರಪ್ಪ ಗೆ ಕೃತಜ್ಞತೆ ಹೇಳ್ತೆನೆ.ಆಪರೇಷನ್ ಕಮಲದ ಹೆಸರಲ್ಲಿ ಆದ ಸೂಟ್ ಕೇಸ್ ವ್ಯಾಪಾರದ ತನಿಖೆನೂ ಆಗ್ಲಿ ಈ ಬಗ್ಗೆ ಕೂಡಾ ಸಿದ್ದರಾಮಯ್ಯ ಆಗ್ರಹ ಮಾಡಿದ್ದಾರೆ.ಯಡ್ಯೂರಪ್ಪ ಸಿದ್ದರಾಮಯ್ಯನವರ ಈ ಸಲಹೆ ಯನ್ನೂ ಪರಿಗಣಿಸಿ ಸಿಬಿಐಗೆ ಒಳಪಡಿಸಲಿ.ಹಿಂದಿನ ಹದಿನೈದು ವರ್ಷಗಳ ಎಲ್ಲಾ ಸರ್ಕಾರದ ಅವಧಿಯಲ್ಲಿ ಏನಾಗಿದೆ ತನಿಖೆ ಆಗ್ಲಿ.
ಯಡ್ಯೂರಪ್ಪ ಸರ್ಕಾರ, ಸಿದ್ದರಾಮಯ್ಯ ಸರ್ಕಾರ ಮತ್ತು ನನ್ನ ಅವಧಿಯ ಎಲ್ಲಾ ವಿಚಾರ ಸಿಬಿಐ ತನಿಖೆ ಅಗಲಿ.ಬರೇ ಸಿಬಿಐ ಯಾಕೆ? ಟ್ರಂಪ್ ಪುಟೀನ್ ಗೆ ಹೇಳಿ ತನಿಖೆ ಮಾಡಿಸಿ.ನನ್ನ ಹೋರಾಟ ತನಿಖೆಯಿಂದ ನಿಲ್ಲಿಸಲು ಸಾಧ್ಯ ಇಲ್ಲ ಅಂತಾ ಮಾಜಿ ಸಿಎಂ ಗುಡುಗಿದ್ದಾರೆ.

ನಮ್ಮ ಸರ್ಕಾರ ವರ್ಗಾವಣೆ ದಂಧೆ ಮಾಡಿದೆ ಅಂದ್ರು.ಯಲಹಂಕ ತಹಸೀಲ್ದಾರ್ ಪೋಸ್ಟ್ ಗೆ ಎಷ್ಡು ವ್ಯವಹಾರ ಆಯ್ತು? ಹೇಳಿ
ನಮಗೆ ವರ್ಗಾವಣೆ ಲೂಟಿ ಅಂತೀರಿ...ನೀವೇನು ಮಾಡ್ತಿದೀರಿ
ಈ ಬಗ್ಗೆ ಯಡ್ಯೂರಪ್ಪ ಪಟಲಾಂ ಏನು ಹೇಳುತ್ತೆ.ವರ್ಗಾವಣೆ ದಂಧೆಗೆ ಯಡ್ಯೂರಪ್ಪ ಸುಪುತ್ರನನ್ನೇ ಬಿಟ್ಡಿದ್ದಾರೆ.ಮುಂದಿನ ದಿನಗಳಲ್ಲಿ ಹಲವಾರು ವಿಚಾರ ಬರುತ್ತೆ ಅಂತಾ ಪರೋಕ್ಷವಾಗಿ ಬಿ ಎಸ್ ವೈ ಗೆ ಟಾಂಗ್ ನೀಡಿದ್ರು.

ರಾಜ್ಯ ಸಂಕಷ್ಟ ದಲ್ಲಿರುವಾಗ ಸರ್ಕಾರ ಟೀಕೆ ಸರಿಯಲ್ಲ ಅಂತ ಸುಮ್ನಿದ್ದೇವೆ.ಎಲ್ಲಾ ರಾಜಕೀಯ ಪಕ್ಷಗಳು ಒಕ್ಕೊರಲಿನಿಂದ ಕೆಲಸ ಮಾಡಬೇಕಾಗಿದೆ.ರಾಜ್ಯದಲ್ಲಿ ಕಳೆದ 25 ದಿನದಿಂದ ಸಚಿವ ಸಂಪುಟವೇ ಇಲ್ಲ.ಕೊನೆಗೂ ಬಿಜೆಪಿ ಹೈಕಮಾಂಡ್ ವಿಸ್ತರಣೆಗೆ ಅವಕಾಶ ಕೊಟ್ಟಿದೆ.
ಮಳೆ ಅನಾಹುತಕ್ಕೆ ರಾಜ್ಯದಲ್ಲಿ ಅಪಾರ ಆಸ್ತಿಪಾಸ್ತಿ ನಷ್ಟವಾಗಿದೆ
ಸಂತ್ರಸ್ಥರಿಗೆ ಯಾವ ರೀತಿಯ ನೆರವು ನೀಡ್ತೀರಿ ಅಂತ ಮೊದಲು ವಿಶ್ವಾಸ ಮೂಡಿಸಿ.ಸರ್ಕಾರದ ನಿಲುವುಗಳೇನು ಇನ್ನಾದರೂ ತಿಳಿಸಿ...

ಕೇಂದ್ರ ನಾಯಕರ ಪ್ರವಾಸ ಮಾಡಿ ಹೋದ್ರು.ಇಲ್ಲಿವರೆಗೆ ಏನೂ ನೆರವು ಕೊಟ್ಟಿಲ್ಲ.ಬಿಜೆಪಿ ಕೇಂದ್ರ ಸರ್ಕಾರ ಬಿಡಿಗಾಸು ಕೊಟ್ಟಿಲ್ಲ.
ರಾಜ್ಯ ಹಲವಾರ ಸವಾಲು ಎದುರಿಸ್ತಾ ಇದೆ

ಮೈತ್ರಿ ಸರ್ಕಾರ ಇದ್ದಾಗ ರಾಜ್ಯದಲ್ಲಿ ಅಭಿವೃದ್ಧಿ ಕುಂಟಿತ ಆಗಿದೆ ಅಂದ್ರು
ಇದು ಪಾಪದ ಸರ್ಕಾರ ಅಂತ ಜನರಲ್ಲಿ ಭಾವನೆ ಮೂಡಿಸಿದ್ರು
ಒಂದು ವರ್ಗದ ಮಾಧ್ಯಮಗಳು ಸರ್ಕಾರ ಅಸ್ತಿರಗೊಳಿಸಲು ಪಣ ತೊಟ್ಟವು.ಈಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದುದೆ.ಇದು ಯಾವುದೇ ಸ್ಪಷ್ಟತೆ ಇಲ್ಲದ ಸರ್ಕಾರ ಅಂತಾಕುಮಾರಸ್ವಾಮಿ ಟೀಕೆ ಮಾಡಿದ್ರು.
---------Body:Kumaraswami helikeConclusion:Kumaraswami
ETV Bharat Logo

Copyright © 2024 Ushodaya Enterprises Pvt. Ltd., All Rights Reserved.