ETV Bharat / state

ಉಡುಪಿ ಜಿಲ್ಲೆಯಲ್ಲಿ ಮೈದುಂಬಿ ಹರಿಯುತ್ತಿರುವ ಸೀತಾ ನದಿ: ಜಿಲ್ಲಾಡಳಿತದಿಂದ ನದಿ ಪಾತ್ರದ ಜನರಿಗೆ ಎಚ್ಚರಿಕೆ - ಉಡುಪಿ ಮಳೆ ಸುದ್ದಿ

ಜಿಲ್ಲೆಯಾದ್ಯಂತ ಕಳೆದ 2 ದಿನಗಳಿಂದ 200 ಮಿಲಿ ಮೀಟರ್​​ನಷ್ಟು ಮಳೆಯಾಗಿದೆ. ಮೋಡ ಮುಸುಕಿದ ವಾತಾವರಣ ಇದ್ದು, ಮಳೆ ಮುಂದುವರಿಯುವ ಸಾಧ್ಯತೆಯಿದೆ. ಹೀಗಾಗಿ ನದಿ ಪಾತ್ರದ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

Udupi
ಸೀತಾನದಿ
author img

By

Published : Aug 9, 2020, 5:53 PM IST

ಉಡುಪಿ: ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ನದಿ ಪಾತ್ರದ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಜಿಲ್ಲೆಯಾದ್ಯಂತ ಕಳೆದ 2 ದಿನಗಳಿಂದ 200 ಮಿಲಿ ಮೀಟರ್​​ನಷ್ಟು ಮಳೆಯಾಗಿದ್ದು, ಸೀತಾನದಿ ತುಂಬಿ ಹರಿಯುತ್ತಿದೆ.

ಸೀತಾನದಿ ತುಂಬಿ ಹರಿಯುತ್ತಿದ್ದು ನೀಲಾವರ, ಮಟಪಾಡಿ ಬಾರ್ಕೂರು ಬಳಿ ಭಾರೀ ಪ್ರಮಾಣದ ಮಳೆ ನೀರು ಹರಿದು ಬರುತ್ತಿದೆ. ನೀಲಾವರ ಚೆಕ್ ಡ್ಯಾಮ್ ಬಳಿ ಅತ್ಯಧಿಕ ಪ್ರಮಾಣದಲ್ಲಿ ನೀರು ನಿಲುಗಡೆಯಾಗುತ್ತಿದ್ದು, ಚೆಕ್​​ಡ್ಯಾಮ್ ಮೇಲ್ಗಡೆಯಿಂದ ಹರಿಯುತ್ತಿರುವ ಸೀತಾನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಜಿಲ್ಲೆಯಾದ್ಯಂತ ಕಳೆದ 2 ದಿನಗಳಿಂದ 200 ಮಿಲಿ ಮೀಟರ್​​ನಷ್ಟು ಮಳೆಯಾಗಿದೆ. ಮೋಡ ಮುಸುಕಿದ ವಾತಾವರಣ ಇದ್ದು, ಮಳೆ ಆರ್ಭಟ ಮುಂದುವರಿಯುವ ಸಾಧ್ಯತೆಯಿದೆ.

ಜಿಲ್ಲೆಯ ಬ್ರಹ್ಮಾವರದ ನದಿ ಪಾತ್ರದ ನಡುಗಡ್ಡೆ, ಅಪಾಯದಲ್ಲಿರುವ ಮನೆಗಳಿಂದ ಜನರ ಸ್ಥಳಾಂತರ ಮಾಡಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.