ಉಡುಪಿ: ಲಾರಿಯಲ್ಲಿ ಅಕ್ರಮವಾಗಿ ಕೋಣಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ಮುಂದುವರೆಸಿದ್ದಾರೆ.
ಹರಿಯಾಣದ ಪಾತೆಬಾದ್ ಜಿಲ್ಲೆಯ ಮಂಜಿತ್ ಸಿಂಗ್ (38), ರಾಜಸ್ಥಾನದ ಪವನ್ ಕುಮಾರ್ (32), ಉತ್ತರ ಪ್ರದೇಶದ ಗುಲ್ವಾಂ (29), ಹರಿಯಾಣ ರವಿಕುಮಾರ್ (25) ಎಂಬುರನ್ನು ವಶಕ್ಕೆ ಪಡೆಯಲಾಗಿದೆ.
ಹೊಸಂಗಡಿ ಚೆಕ್ ಪೋಸ್ಟ್ ಬಳಿ ಹುಲಿಕಲ್ ಘಾಟಿಯಿಂದ ಹೊಸಂಗಡಿ ಕಡೆಗೆ ಬಂದ ಲಾರಿ ತಪಾಸಣೆ ನಡೆಸಿದಾಗ ಅಕ್ರಮವಾಗಿ 30 ಕೋಣಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ. ಈ ಕುರಿತು ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.