ಉಡುಪಿ : ಹೊರ ರಾಜ್ಯದಿಂದ ಬಂದವರನ್ನು ಹೋಮ್ ಅಥವಾ ಸಾಂಸ್ಥಿಕ ಕ್ವಾರಂಟೈನ್ಗೆ ಕಳುಹಿಸುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಇದೆ. ಜಿಲ್ಲೆಯಲ್ಲಿ ಮಹಾರಾಷ್ಟ್ರದಿಂದ ಬರುವರಿಗೆ 14 ದಿನ ಹೋಮ್ ಕ್ವಾರಂಟೈನ್ ಖಡ್ಡಾಯವಾಗಿದೆ. ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ರೆ ಕಠಿಣ ಶಿಕ್ಷೆ ವಿಧಿಸಲಾಗುವುದು ಅಂತಾ ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದ್ದಾರೆ.
ಹೋಮ್ ಕ್ವಾರಂಟೈನ್ ವ್ಯಕ್ತಿಯ ಮನೆ ಬಾಗಿಲಿಗೆ ಭಿತ್ತಿಪತ್ರ ಅಂಟಿಸಲಾಗುವುದು. ಕ್ವಾರಂಟೈನ್ ಇರುವ ವ್ಯಕ್ತಿಯ ಬಗ್ಗೆ ನೆರಮನೆಯವರು ಮಾಹಿತಿ ನೀಡಬೇಕು. ಗ್ರಾಮದಲ್ಲಿ ಪಂಚಾಯತ್‌ನಿಂದ ಸಂಪೂರ್ಣ ನಿರ್ವಹಣೆ, ನಿಗಾ ವಹಿಸಲಾಗುವುದು. ಪ್ರತಿದಿನ ಭೇಟಿ ನೀಡಿ ಪರಿಶೀಲಿಸಬೇಕು. ಪ್ರತಿ ಹಳ್ಳಿಯಲ್ಲಿ ಮೂರು ಸದಸ್ಯರ ತಂಡ ರಚನೆ ಮಾಡಿದ್ದೇವೆ. ಪ್ರತಿ ದಿನ ಈ ತಂಡ ರಿಪೋರ್ಟ್ ಕೊಡಬೇಕು. ಉಸ್ತುವಾರಿಗೆ ಫ್ಲೈಯಿಂಗ್ ಸ್ಕ್ವಾಡ್ ಮಾಡಿದ್ದೇವೆ. ನಿಯಮ ಉಲ್ಲಂಘನೆ ಮಾಡಿದವರಿಗೆ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುವುದು ಎಂದರು.
ಪ್ರತಿ ತಾಲೂಕಿನಲ್ಲಿ ಎರಡು ಕ್ವಾರಂಟೈನ್ ಕೇಂದ್ರ ಉಳಿಸಿಕೊಂಡಿದ್ದೇವೆ. ಗರ್ಭಿಣಿ, ಮಕ್ಕಳು, ವಯಸ್ಸಾದವರ ಪಲ್ಸ್ ಆಕ್ಸಿಮೀಟರ್ ರೀಡಿಂಗ್ ಮಾಡುತ್ತೇವೆ. ಹೋಮ್ ಕ್ವಾರಂಟೈನ್ ಸೀಲ್ ಹಾಕಿದವರು ತಿರುಗಾಡಿದ್ರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಎಲ್ಲಿಗಾದ್ರೂ ಭೇಟಿ ನೀಡಿದ್ರೆ ಆಯಾ ಸಂಸ್ಥೆಗಳು ತಿಳಿಸಬೇಕು. ತಕ್ಷಣ ಸಾಂಸ್ಥಿಕ ಕ್ವಾರಂಟೈನ್ಗೆ ಶಿಫ್ಟ್ ಮಾಡುತ್ತೇವೆ ಎಂದಿದ್ದಾರೆ.
ಅನ್ಯ ರಾಜ್ಯದಿಂದ ಬರುವವರು ಸೇವಾಸಿಂಧು ಅರ್ಜಿ ಹಾಕಲೇಬೇಕು. ಬೇರೆ ರಾಜ್ಯದವರಿಗೆ ಅಟೋಮೆಟಿಕ್ ಅಪ್ರೂವಲ್ ಸಿಗುತ್ತೆ. ಮಹಾರಾಷ್ಟ್ರದಿಂದ ಬರಲು ಡಿಸಿ ಅಪ್ರೂವಲ್ ಬೇಕು ಎಂದಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 14,034 ಮಕ್ಕಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಾರೆ. ಜಿಲ್ಲೆಯಲ್ಲಿ 51 ಪರೀಕ್ಷಾ ಕೇಂದ್ರವಿದೆ ಅಂತಾ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ. ಅನ್ಯ ರಾಜ್ಯದಿಂದ ಬಂದವರಿಗೆ ಸಾಂಸ್ಥಿಕ ಕ್ವಾರಂಟೈನ್ ವ್ಯವಸ್ಥೆ ರದ್ದಾಗಿದೆ. ಇಂದು ಸಾಂಸ್ಥಿಕ ಕ್ವಾರಂಟೈನ್ ಇರುವವರನ್ನು ಹೋಂ ಕ್ವಾರಂಟೈನ್ಗೆ ಕಳುಹಿಸಲಾಗುತ್ತೆ.
ಈಗಾಗಲೇ ಶಾಲೆ ಹಾಗೂ ಹಾಸ್ಟೆಲ್ಗಳ ಕ್ವಾರಂಟೈನ್ ಸೆಂಟರ್ ಕಾರ್ಯಸ್ಥಗಿತವಾಗಿದೆ. ಎಸ್ಎಸ್ಎಲ್ಸಿ ಪರೀಕ್ಷೆಯ ಮೂರು ದಿನ ಮುನ್ನ ಮತ್ತೊಮ್ಮೆ ಸ್ಯಾನಿಟೈಸ್ ಮಾಡಲಾಗುತ್ತೆ. ಪರೀಕ್ಷಾ ಸಮಯದಲ್ಲಿ ಪ್ರತಿದಿನ ಸ್ಯಾನಿಟೈಸ್ ಮಾಡುತ್ತೇವೆ, ಪೋಷಕರಿಗೆ ಯಾವುದೇ ಆತಂಕ ಬೇಡ ಎಂದಿದ್ದಾರೆ.