ಉಡುಪಿ: ನವ ವಧುವಿನ ಕುಟುಂಬದ ಏಳು ಮಂದಿಗೆ ಕೊರೊನಾ ತಗುಲಿದೆ. ಕಾಪು ತಾಲೂಕು ಮಲ್ಲಾರಿನ ಕೊಂಬಗುಡ್ಡೆಯ ಕುಟುಂಬಕ್ಕೆ ಕೊರೊನಾ ದೃಢಪಟ್ಟಿದೆ.
80ಕ್ಕೂ ಹೆಚ್ಚು ಮಂದಿ ಮೆಹಂದಿ ಕಾರ್ಯದಲ್ಲಿ ಭಾಗವಹಿಸಿದ್ದು, ಅವರ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು. ಇದೀಗ 3 ಮಕ್ಕಳು, 3 ಮಹಿಳೆಯರು ಸಹಿತ 7 ಮಂದಿಗೆ ಪಾಸಿಟಿವ್ ಬಂದಿದೆ.
ಕಾಪು ಠಾಣಾ ಕಾನ್ಸ್ಸ್ಟೇಬಲ್ಗೆ ಕೊರೊನಾ:
ಕಾಪು ಠಾಣೆಯ ಕಾನ್ಸ್ಸ್ಟೇಬಲ್ಗೆ ಕೊರೊನಾ ದೃಢಪಟ್ಟಿದೆ. ಎರಡು ದಿನಗಳ ಹಿಂದೆ ಇದೇ ಠಾಣೆಯ ಎಎಸ್ಐಗೆ ಕೊರೊನಾ ದೃಢವಾಗಿತ್ತು.
ಕ್ವಾರಂಟೈನ್ನಲ್ಲಿದ್ದ ಕಾನ್ಸ್ಸ್ಟೇಬಲ್ಗೆ ಸೋಂಕು ದೃಢಪಟ್ಟಿದ್ದು, ಕಾಪು ಠಾಣೆಯ ಒಟ್ಟು ಇಬ್ಬರು ಪೊಲೀಸರಿಗೆ ಸೋಂಕು ತಗುಲಿದಂತಾಗಿದೆ. ಇವರಲ್ಲದೆ ಉಡುಪಿ ನಗರಸಭೆಯ ಸದಸ್ಯರಿಗೆ ಸೋಂಕು ಕಾಣಿಸಿಕೊಂಡಿದೆ. ಸೋಂಕಿತರು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಗ್ಯಾಧಿಕಾರಿಗಳು ಸೋಂಕಿತರ ಸೋಂಕಿನ ಮೂಲ ಪತ್ತೆ ಮಾಡುತ್ತಿದ್ದಾರೆ.
ಈಗಾಗಲೇ ಸೀಲ್ಡೌನ್ ಆಗಿರುವ ನಗರಸಭೆಯ ಆರೋಗ್ಯ ಇಲಾಖೆಯ ಅಧಿಕಾರಿಗೆ ಸೋಂಕು ದೃಢವಾಗಿತ್ತು. ಇದೀಗ ನಗರಸಭೆಯ ಇಬ್ಬರು ಮಹಿಳಾ ಸದಸ್ಯೆಯರಿಗೆ ಸೋಂಕು ತಗಲಿದೆ. ಜೊತೆಗೆ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿನ ವೈದ್ಯರು, ರೋಗಿಗಳು, ಸಿಬ್ಬಂದಿಗೂ ಕೊರೊನಾ ಬಾಧಿಸಿದೆ. 10ಕ್ಕೂ ಹೆಚ್ಚು ಜನರಲ್ಲಿ ವೈರಾಣು ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ.