ಉಡುಪಿ: ವ್ಯಾಪಾರಿ ರಾಜಕಾರಣ ಅಳಿಸಿ ಪಾರದರ್ಶಕ ರಾಜಕಾರಣ ತರುವುದು ನನ್ನ ಬಹು ಮುಖ್ಯ ಉದ್ದೇಶ ಎಂದು ಚಿತ್ರನಟ ಹಾಗೂ ಪ್ರಜಾಕೀಯ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಪ್ರಜಾಕೀಯ ಅಭ್ಯರ್ಥಿ ಸುರೇಶ್ ಕುಂದರ್ ಜೊತೆ ಉಪೇಂದ್ರ ನಗರಕ್ಕೆ ಆಗಮಿಸಿ, ಪ್ರಚಾರದಲ್ಲಿ ತೊಡಗಿಕೊಂಡರು. ನಂತರ ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ಮೊದಲ ಹಂತದ 14 ಕ್ಷೇತ್ರದ ಅಭ್ಯರ್ಥಿಗಳ ಹೆಸರು ಘೋಷಿಸಿದ್ದೇವೆ. ಎರಡನೇ ಹಂತದಲ್ಲಿ ಮತದಾನ ನಡೆಯುವ ಕಡೆಯೂ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇವೆ ಎಂದರು.
ಮೊದಲ ಹಂತದಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪರಿಚಯ ಈಗಾಗಲೇ ಮಾಡಿದ್ದೇನೆ. ಉಳಿದ ಅಭ್ಯರ್ಥಿಗಳ ಬಗ್ಗೆ ಮಾಹಿತಿ ನೀಡುವೆ ಅಂತಾ ಉಪೇಂದ್ರ ಹೇಳಿದ್ದಾರೆ.