ETV Bharat / state

ತುಮಕೂರು: ಗೋಡೆ ಬರಹದಲ್ಲಿ ತಪ್ಪು ಕನ್ನಡ ಪದ ಬಳಕೆ: ಜನರ ಆಕ್ರೋಶ - ಈಟಿವಿ ಭಾರತ ಕನ್ನಡ

ಸಂದೇಶ ಸಾರುವ ಗೋಡೆ ಬರಹಗಳಲ್ಲಿ ಕನ್ನಡ ಪದಗಳು ತಪ್ಪಾಗಿ ಬರೆದಿರುವುದರಿಂದ ಈ ಕುರಿತು ಎಚ್ಚೆತ್ತುಕೊಳ್ಳದಿದ್ದರೆ ಪ್ರತಿಭಟನೆ ಮಾಡುವುದಾಗಿ ಸ್ಥಳಿಯರು ಎಚ್ಚರಿಕೆ ನೀಡಿದ್ದಾರೆ.

Kn_tmk_0
ಗೋಡೆ ಬರಹದಲ್ಲಿ ತಪ್ಪು ಕನ್ನಡ ಪದ ಬಳಕೆ
author img

By

Published : Sep 23, 2022, 10:44 AM IST

ತುಮಕೂರು: ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ ನಗರದಲ್ಲಿ ವಿವಿಧ ಕಡೆ ಜಾಗೃತಿ ಮೂಡಿಸುವಂತಹ ಗೋಡೆ ಬರಹಗಳನ್ನು ಬರೆಯಲಾಗುತ್ತಿದ್ದು ಅವೆಲ್ಲವೂ ಬಹುತೇಕ ತಪ್ಪು ಕನ್ನಡ ಪದಗಳಿಂದ ಕೂಡಿವೆ. ಹೀಗಾಗಿ, ಜನರ ಆಕ್ರೋಶಕ್ಕೆ ಕಾರಣವಾಗಿದೆ.

ನಗರದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಪರಿಸರ, ಟ್ರಾಫಿಕ್ ರೂಲ್ಸ್, ಸಂಚಾರ ನಿಯಮಗಳು ಹಾಗೂ ಸ್ಮಾರ್ಟ್ ಸಿಟಿ ಕುರಿತ ಸಂದೇಶ ಸಾರುವ ಗೋಡೆ ಬರಹಗಳನ್ನು ಬರೆಯಲಾಗುತ್ತಿದೆ. ಆದರೇ ಬರಹಗಳಲ್ಲಿ ಕನ್ನಡ ಪದಗಳು ತಪ್ಪಾಗಿರುವುದರಿಂದ ಜನರ ಆಕ್ರೋಶಕ್ಕೆ ಗುರಿಯಾಗಿದೆ. ಇನ್ನು ಕನ್ನಡ ಪದಗಳ ದೊಡ್ಡ ಅಕ್ಷರದಲ್ಲಿ ತಪ್ಪಾಗಿ ಬರೆಯುತ್ತಿದ್ದರೂ ಕೂಡ ಸ್ಮಾರ್ಟ್ ಸಿಟಿ ಅಧಿಕಾರಿಗಳು ಅಥವಾ ಮಹಾನಗರ ಪಾಲಿಕೆ ಸಿಬ್ಬಂದಿಗಳು ಇತ್ತ ಗಮನಹರಿಸದೆ ನಿರ್ಲಕ್ಷ್ಯ ತೋರಿಸಿರುವುದು ಸ್ಮಾರ್ಟ್ ಸಿಟಿ ಕಾರ್ಯವೈಖರಿಯ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ.

ಕಳೆದ ಒಂದು ತಿಂಗಳಿನಿಂದ ಈ ರೀತಿ ತಪ್ಪಾಗಿ ಕನ್ನಡ ಪದಗಳನ್ನು ಬಳಸುತ್ತ ಗೋಡೆ ಬರಹಗಳನ್ನು ಬರೆಯಲಾಗುತ್ತಿದ್ದು, ಯಾವೊಬ್ಬ ಅಧಿಕಾರಿಯೂ ಇತ್ತ ಗಮನ ಹರಿಸುತ್ತಿಲ್ಲ.ಇದು ಹೀಗೆ ಮುಂದುವರಿದರೆ ಪ್ರತಿಭಟನೆ ನಡೆಸಲಾಗುವುದು ಎಂದು ಕನ್ನಡಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ದೊಡ್ಡಬಳ್ಳಾಪುರ: ಡಿಸಿ ಜೊತೆ ಕುಳಿತು ಕಾರ್ಯವೈಖರಿ ವೀಕ್ಷಣೆ ಮಾಡಿದ ವಿದ್ಯಾರ್ಥಿನಿ ವಿದ್ಯಾಶ್ರೀ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.