ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಅಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ತುಮಕೂರು ಜಿಲ್ಲೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಪ್ರಯೋಗಾಲಯ ತಜ್ಞರು, ಹೆಲ್ತ್ ಇನ್ಸ್ಪೆಕ್ಟರ್, ಫಾರ್ಮಸಿ ಆಫೀಸರ್ ಸೇರಿದಂತೆ ಒಟ್ಟು 15 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ಈ ಹುದ್ದೆಗಳ ನೇಮಕಾತಿ ನಡೆಯಲಿದ್ದು, ಆಸಕ್ತ ಮತ್ತು ಸೂಕ್ತ ಅಭ್ಯರ್ಥಿಗಳು ಈ ಹುದ್ದೆಗಾಗಿ ನಡೆಯುವ ಸಂದರ್ಶನದಲ್ಲಿ ಭಾಗಿಯಾಗಬಹುದಾಗಿದೆ.
ಹುದ್ದೆ ವಿವರ: ಪ್ರಯೋಗ ಶಾಲಾ ತಂತ್ರಜ್ಞರು, ಜಿಲ್ಲಾ ಆಸ್ಪತ್ರೆ ಗುಣಮಟ್ಟ ನಿರ್ವಹಕರು, ಮಕ್ಕಳ ಆರೋಗ್ಯ ಸಮಾಲೋಚಕರು, ಫಾರ್ಮಸಿ ಅಧಿಕಾರಿಗಳು, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ, ಆರೋಗ್ಯ ನಿರೀಕ್ಷಣಾಧಿಕಾರಿ, ಮಕ್ಕಳ ತಜ್ಞರು, ಶುಶ್ರೂಷಣಾಧಿಕಾರಿ, ಪಿಜಿಯೋಥೆರಪಿಸ್ಟ್, ಆಡಿಯಾಲಜಿಸ್ಟ್, ಕ್ಲಿನಿಕಲ್ ಸೈಕಲಾಜಿಸ್ಟ್, ಅಪ್ಟೋಮೆ ಟ್ರೆಸ್ಟ್, ಮನೋವೈದ್ಯರು ಹುದ್ದೆಗಳ ಭರ್ತಿ ನಡೆಯಲಿದೆ.
ವಿದ್ಯಾರ್ಹತೆ, ವೇತನ:
- ಪ್ರಯೋಗ ಶಾಲಾ ತಂತ್ರಜ್ಞರು: ಎಸ್ಎಸ್ಎಲ್ಸಿ, ಡಿಪ್ಲೊಮಾ, ಪಿಯುಸಿ, ಬಿಎಂಎಲ್ಡಿ- 16,100 ರೂ ಮಾಸಿಕ
- ಜಿಲ್ಲಾ ಆಸ್ಪತ್ರೆ ಗುಣಮಟ್ಟ ನಿರ್ವಹಕರು: ಎಂಬಿಬಿಎಸ್, ಬಿಡಿಎಸ್, ಆಯುಷ್- 35,000 ರೂ ಮಾಸಿಕ
- ಮಕ್ಕಳ ಆರೋಗ್ಯ ಸಮಾಲೋಚಕರು: ಪದವಿ, ಎಂಎಸ್ಡಬ್ಲ್ಯೂ- 15,939 ರೂ ಮಾಸಿಕ
- ಫಾರ್ಮಸಿ ಅಧಿಕಾರಿಗಳು: ಬಿ ಫಾರ್ಮ್ 12,000 ರೂ ಮಾಸಿಕ
- ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ: ಡಿಎಚ್ಎಫ್ಡಬ್ಲ್ಯೂಎಸ್ ನಿಯಮ ಪ್ರಕಾರ- 12600 ರೂ ಮಾಸಿಕ
- ಆರೋಗ್ಯ ನಿರೀಕ್ಷಣಾಧಿಕಾರಿ: ಡಿಪ್ಲೊಮಾ, ಪಿಯುಸಿ- 11,500 ರೂ ಮಾಸಿಕ
- ಮಕ್ಕಳ ತಜ್ಞರು: ಎಂಬಿಬಿಎಸ್, ಮಕ್ಕಳ ತಜ್ಞರಲ್ಲಿ ಸ್ನಾತಕೋತ್ತರ ಪದವಿ- 110,000 ರೂ ಮಾಸಿಕ
- ಶುಶ್ರೂಷಣಾಧಿಕಾರಿ: ಬಿಎಸ್ಸಿ ನರ್ಸಿಂಗ್- 13,225 ರೂ ಮಾಸಿಕ
- ಪಿಜಿಯೋಥೆರಪಿಸ್ಟ್; ಪಿಜಿಯೋಥೆರಪಿಸ್ಟ್ನಲ್ಲಿ ಪದವಿ- 25000 ರೂ ಮಾಸಿಕ
- ಆಡಿಯಾಲಜಿಸ್ಟ್: ಸ್ಲೀಚ್ ಅಂಡ್ ಲ್ಯಾಕ್ವೆಜ್ ಪಥಾಲಾಜಿಯಲ್ಲಿ ಪದವಿ- 25,000 ರೂ ಮಾಸಿಕ
- ಕ್ಲಿನಿಕಲ್ ಸೈಕಲಾಜಿಸ್ಟ್: ಚೈಲ್ಡ್ ಸೈಕಲಾಜಿಯಲ್ಲಿ ಸ್ನಾತಕೋತ್ತರ ಪದವಿ- 25,000 ರೂ ಮಾಸಿಕ
- ಅಪ್ಟೋಮೆ ಟ್ರೆಸ್ಟ್: ಅಪ್ಟೋಮೆಟ್ರೆಸ್ಟ್ನಲ್ಲಿ ಪದವಿ- 12679 ರೂ ಮಾಸಿಕ
- ಮನೋವೈದ್ಯರು : ಎಂಬಿಬಿಎಸ್, ಸೈಕಿಯಾಟ್ರೆಸ್ಟ್ನಲ್ಲಿ ಡಿಎನ್ಬಿ-1,10,000 ರೂ ಮಾಸಿಕ
ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಜೂನ್ 27ರಂದು ನಡೆಯುವ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಈ ನೇರ ಸಂದರ್ಶನದ ದಿನವೇ ಅಭ್ಯರ್ಥಿಗಳಿಗೆ ಬೆಳಗ್ಗೆ 10 ರಿಂದ 12ಗಂಟೆಯವರಗೆ ನಿಗದಿತ ನಮೂನೆಯ ಅರ್ಜಿಯನ್ನು ನೀಡಲಾಗುವುದು. ಈ ಸಮಯದೊಳಗೆ ಬಂದ ಅಭ್ಯರ್ಥಿಗಳು ಮಾತ್ರ ನೇರ ಸಂದರ್ಶನಕ್ಕೆ ಅರ್ಹರಾಗಿದ್ದಾರೆ.
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಮೆರಿಟ್ ಕಂ ರೋಸ್ಟರ್ ವಿಭಾಗದಲ್ಲಿ ನೇರ ಸಂದರ್ಶನ ಮೂಲಕ ಆರಿಸಲಾಗುವುದು . ನೇರ ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಎಲ್ಲಾ ಶೈಕ್ಷಣಿಕ ದಾಖಲೆ, ಜಾತಿ ಪ್ರಮಾಣ ಪತ್ರ, ಅಂಕವಿಕತೆ ಪ್ರಮಾಣ ಪತ್ರ, ವಿಳಾಸ ದೃಢೀಕರಣ ಸೇರಿದಂತೆ ಅಗತ್ಯ ದಾಖಲಾತಿಗಳ ನಕಲಿ ಮತ್ತು ಮೂಲ ಪ್ರತಿಗಳನ್ನು ತರುವುದು ಕಡ್ಡಾಯವಾಗಿದೆ.
ವಿಶೇಷ ಸೂಚನೆ: ಈ ಹುದ್ದೆಗಳಿಗೆ ಕಿಯೋನಿಕ್ಸ್ ಅಥವಾ ಸರ್ಕಾರಿದಂದ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು.
ನೇರ ಸಂದರ್ಶನ ನಡೆಯುವ ದಿನ- ವಿಳಾಸ: ಜೂನ್ 27ರಂದು ತುಮಕೂರಿನ ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿಗಳ ಘಟನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಗಳ ಸಂಕೀರ್ಣ, ಅಮಾನಿಕೆರೆ ಮುಂಭಾಗ, ತುಮಕೂರು.
ಈ ಹುದ್ದೆ ಕುರಿತು ವಿವರವಾದ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ವೀಕ್ಷಣೆಗೆ ಅಭ್ಯರ್ಥಿಗಳು tumkur.nic.in ಈ ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ.
ಇದನ್ನೂ ಓದಿ: Jobs in Bengaluru: ಬೆಂಗಳೂರು ಕಾಫಿ ಬೋರ್ಡ್ನಲ್ಲಿದೆ ಉದ್ಯೋಗ; ಅರ್ಹತೆ ಏನು? ಸಂಬಳ ಎಷ್ಟು? ಸಂಪೂರ್ಣ ಮಾಹಿತಿ