ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿಗೆ ಈ ವರ್ಷ ಮೊದಲ ಹಂತದಲ್ಲಿ ಗೊರೂರಿನ ಹೇಮಾವತಿ ಜಲಾಶಯದಿಂದ ನೀರು ಹರಿಸಲಾಗಿದ್ದು, ಕುಣಿಗಲ್ ಶಾಸಕ ರಂಗನಾಥ್ ಆರತಿ ಬೆಳಗಿ ಬರಮಾಡಿಕೊಂಡರು.
ಕೊತ್ತಗೆರೆ ಹೋಬಳಿಯ ಕೋಡಿಹಳ್ಳಿ ಪಾಳ್ಯದ ಬಳಿ ಇರುವ ಹೇಮಾವತಿ ನಾಲೆಯ ಬಳಿ ಆರತಿ ಬೆಳಗಿ ಪೂಜೆ ಮಾಡಿದರು. ಆರತಿ ವೇಳೆ, ಸಂಸದ ಡಿ. ಕೆ. ಸುರೇಶ್ ಕೂಡ ಭಾಗಿಯಾಗಿ ಮೊದಲ ಹಂತದಲ್ಲೇ ಹೇಮಾವತಿ ನೀರನ್ನು ಕುಣಿಗಲ್ ತಾಲೂಕಿಗೆ ಹರಿಸಿದ ಜಿಲ್ಲಾಡಳಿತಕ್ಕೆ ಧನ್ಯವಾದಗಳನ್ನು ತಿಳಿಸಿದರು.