ETV Bharat / state

ಕಲ್ಪತರು ನಾಡಿನಲ್ಲಿ ಮತ್ತೆ 35 ಮಂದಿಗೆ ಕೋವಿಡ್​​ ಸೋಂಕು - ತುಮಕೂರು ಕೊವಿಡ್​ ಪಾಸಿಟಿವ್​ ಸುದ್ದಿ

ತುಮಕೂರು ಜಿಲ್ಲೆಯಲ್ಲಿ ಇಂದು 35 ಮಂದಿಯಲ್ಲಿ ಕೊರೊನಾ ಸೋಂಕು ಧೃಢವಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 137 ಗುಣಮುಖರಾಗಿದ್ದಾರೆ. ಐಸಿಯು ಘಟಕದಲ್ಲಿ ಐವರು ಚಿಕಿತ್ಸೆ ಪಡೆಯುತ್ತಿದ್ದಾರೆ.

tumakuru-coronavirus-report
ಕಲ್ಪತರು ನಾಡಿನಲ್ಲಿ ಮತ್ತೆ 35 ಮಂದಿಗೆ ಕೋವಿಡ್​​ ಸೋಂಕು
author img

By

Published : Jul 13, 2020, 11:49 PM IST

ತುಮಕೂರು: ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಇಂದು 35 ಮಂದಿಯಲ್ಲಿ ಕೊರೊನಾ ಸೋಂಕು ಧೃಢವಾಗಿದ್ದು ಅದರಲ್ಲಿ ಐವರು ಪೊಲೀಸರು ಹಾಗೂ ಓರ್ವ ಕೆಎಸ್ಆರ್​ಟಿಸಿ ನೌಕರ ಕೂಡ ಸೇರಿದ್ದಾರೆ.

ಈ ಮೂಲಕ ತುಮಕೂರು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 513ಕ್ಕೆ ಏರಿಕೆಯಾಗಿದೆ. 361 ಮಂದಿ ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಮೂವರು ಡಿಸ್ಚಾರ್ಜ್ ಆಗಿದ್ದು ಜಿಲ್ಲೆಯಲ್ಲಿ ಇದುವರೆಗೆ 137 ಗುಣಮುಖರಾಗಿದ್ದಾರೆ. ಐಸಿಯು ಘಟಕದಲ್ಲಿ ಐವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಜೂನ್ 10ರಂದು 58 ವರ್ಷದ ಮಹಿಳೆ ಮೃತಪಟ್ಟಿದ್ದರು. ಜೂನ್ 11ರಂದು ಶವದ ಗಂಟಲು ದ್ರವ ಮಾದರಿ ತೆಗೆಯಲಾಗಿತ್ತು. ಇಂದು ಕೋವಿಡ್ 19 ಪಾಸಿಟಿವ್ ದೃಢಪಟ್ಟಿದೆ. ಮೃತ ಮಹಿಳೆಯು ತುಮಕೂರಿನ ಸದಾಶಿವ ನಗರ ಬಡಾವಣೆಯ ನಿವಾಸಿ ಆಗಿದ್ದಾರೆ. ಮೃತ ಮಹಿಳೆಯ ಸಂಪರ್ಕದಲ್ಲಿದ್ದ 11 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.