ತುಮಕೂರು : ರಾಜ್ಯದಲ್ಲಿ ಜೆಡಿಎಸ್‌ಗೆ ಶಕ್ತಿ ಕಡಿಮೆ ಇರಬಹುದು, ಕಾಂಗ್ರೆಸ್‌ಗೆ ಹೆಚ್ಚು ಶಕ್ತಿ ಇರಬಹುದು. ಆದ್ರೆ ಎರಡೂ ಶಕ್ತಿಯನ್ನೂ ಒಟ್ಟುಗೂಡಿಸಿ ಬಿಜೆಪಿಯನ್ನ ಕುಗ್ಗಿಸಬಹುದು ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.
ನಗರದ ಗ್ರಂಥಾಲಯದ ಆವರಣದಲ್ಲಿ ನಡೆದ ಜೆಡಿಎಸ್ ಮತ್ತು ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೆಡಿಎಸ್-ಕಾಂಗ್ರೆಸ್ ಬಲ ಪ್ರದರ್ಶಿಸುವ ಮೂಲಕ ರಾಜಕೀಯವಾಗಿ ಬಿಜೆಪಿಯನ್ನ ಕಟ್ಟಿಹಾಕೋಣವೆಂದು ಕರೆ ನೀಡಿದರು.
ಬಿಜೆಪಿ, ಶಿವಶೇನೆ, ಅಕಾಲಿದಳ ಹೊರತುಡಿಸಿದರೆ ಎಲ್ಲರೂ ಮಹಾಘಟಬಂಧನ್ ಗೆ ಬಂದಿದ್ದಾರೆ. ಬಿಜೆಪಿ ಒಂದಂಕಿಯಲ್ಲೇ ಇರಬೇಕು, ಎರಡಂಕಿ ತಲುಪಲು ಅವಕಾಶ ಕೊಡಬಾರದು. ಈ ಸಾಧನೆ ಮಾಡಲು ನಿಮ್ಮೆಲ್ಲರ ಸಹಕಾರಬೇಕು ಎಂದು ಮೈತ್ರಿ ಪಕ್ಷದ ಅಭ್ಯರ್ಥಿ ದೇವೇಗೌಡ ಮನವಿ ಮಾಡಿದರು.
ನಾನು ಹೆಚ್ಚು ಮಾತನಾಡಲ್ಲ, ನನ್ನ ಬದಲಾಗಿ ಸಚಿವ ಜಮೀರ್ ಅಹಮದ್ ಮಾತಾಡ್ತಾರೆ. ಈ ಅಲ್ಪ ಸಂಖ್ಯಾತರ ಸಮಾವೇಶ ಆಯೋಜಿಸಲು ಅವರೇ ಕಾರಣ ಎನ್ನುವ ಮೂಲಕ ಸಚಿವ ಜಮೀರ್ ಮುಖದಲ್ಲೂ ಮಂದಹಾಸ ಮೂಡುವಂತೆ ಮಾಡಿದ್ರು ದೇವೇಗೌಡ.