ತುಮಕೂರು : ಆನ್ಲೈನ್ನಲ್ಲಿ ಪರೀಕ್ಷೆಗಳನ್ನು ನಡೆಸಬೇಕೆಂದು ಆಗ್ರಹಿಸಿ ನಗರದ ಶ್ರೀ ಸಿದ್ದಾರ್ಥ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಎದುರು ವಿದ್ಯಾರ್ಥಿಗಳು ಕನ್ನಡ ಚಳವಳಿ ಪಕ್ಷದ ಮುಖ್ಯಸ್ಥ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಈಗಾಗಲೇ ಆನ್ಲೈನ್ ಕ್ಲಾಸ್ಗಳನ್ನು ನಡೆಸಿರುವಂತಹ ಕಾಲೇಜು ಆಡಳಿತ ಮಂಡಳಿ ಪರೀಕ್ಷೆಗಳನ್ನು ಕೂಡ ಕಡ್ಡಾಯವಾಗಿ ಆಫ್ಲೈನ್ನಲ್ಲಿ ಬರೆಯಬೇಕೆಂದು ಹೇಳುತ್ತಿದೆ. ಅಲ್ಲದೆ ಈಗಾಗಲೇ ಎರಡು ಟೆಸ್ಟ್ಗಳನ್ನು ಆನ್ಲೈನ್ನಲ್ಲೇ ನಡೆಸಿದೆ, ಅದೇ ರೀತಿ ಎಕ್ಸಾಮ್‌ಗಳನ್ನು ಕೂಡ ಆನ್ಲೈನ್ನಲ್ಲೇ ನಡೆಸಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಕಾಲೇಜು ಮಂಡಳಿಗಳು ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡು ನಡೆಸಿರುವಂತಹ ಆನ್ಲೈನ್ ಟೆಸ್ಟ್ಗಳ ರೀತಿ ಎಕ್ಸಾಮ್‌ಗಳನ್ನು ಕೂಡ ನಡೆಸಬಹುದಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದರು.