ETV Bharat / state

ತುಮಕೂರಿನಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಯಶಸ್ವಿ.. ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಕಾಮಾಕ್ಷಿ - ತುಮಕೂರಿನಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಯಶಸ್ವಿ

ಎಸ್ಎಸ್ಎಲ್​ಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾಗುವಂತೆ ನಿತ್ಯ ಪೋಷಕರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಧೈರ್ಯ ಹೇಳಲಾಗುತ್ತಿತ್ತು. ಅಲ್ಲದೆ ವಿದ್ಯಾರ್ಥಿ ಪರೀಕ್ಷೆ ಬರೆದ ನಂತರ ಮನೆಗೆ ತಲುಪಿದ್ದಾನೆಯೋ ಇಲ್ಲವೋ ಎಂಬುದನ್ನು ಕೂಡ ಸಂಬಂಧಪಟ್ಟ ಶಿಕ್ಷಕರು ಖಾತರಿಪಡಿಸಿಕೊಳ್ಳುತ್ತಿದ್ದರು..

dsdd
ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಕಾಮಾಕ್ಷಿ
author img

By

Published : Jul 3, 2020, 10:20 PM IST

ತುಮಕೂರು : ಜಿಲ್ಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಂಡು ಬಂದಿರೋದು ಹೊರತುಪಡಿಸಿದ್ರೆ ಇನ್ನುಳಿದಂತೆ ಎಸ್ಎಸ್ಎಲ್​ಸಿ ಪರೀಕ್ಷೆ ನಿರಾತಂಕವಾಗಿ ಪೂರ್ಣಗೊಂಡಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಕಾಮಾಕ್ಷಿ ಹೇಳಿದ್ದಾರೆ.

ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಕಾಮಾಕ್ಷಿ

ಇನ್ನೊಂದೆಡೆ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ದೂರ ಮಾಡಲು ಶಿಕ್ಷಣ ಇಲಾಖೆ ಸಿಬ್ಬಂದಿ ನಿರಂತರವಾಗಿ ಯೋಜನಾ ಬದ್ಧವಾಗಿ ಕೆಲಸ ಮಾಡಿದ್ದೇ ಇದಕ್ಕೆ ಕಾರಣವಾಗಿದೆ. ಪ್ರತಿ ಸರ್ಕಾರಿ ಶಾಲಾ ಶಿಕ್ಷಕರಿಗೆ ಇಂತಿಷ್ಟು ವಿದ್ಯಾರ್ಥಿಗಳು ಎಂಬಂತೆ ಒಂದು ರೀತಿ ದತ್ತು ನೀಡಲಾಗಿತ್ತು. ಅಂದ್ರೆ ಎಸ್ಎಸ್ಎಲ್​ಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾಗುವಂತೆ ನಿತ್ಯ ಪೋಷಕರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಧೈರ್ಯ ಹೇಳಲಾಗುತ್ತಿತ್ತು. ಅಲ್ಲದೆ ವಿದ್ಯಾರ್ಥಿ ಪರೀಕ್ಷೆ ಬರೆದ ನಂತರ ಮನೆಗೆ ತಲುಪಿದ್ದಾನೆಯೋ ಇಲ್ಲವೋ ಎಂಬುದನ್ನು ಕೂಡ ಸಂಬಂಧಪಟ್ಟ ಶಿಕ್ಷಕರು ಖಾತರಿಪಡಿಸಿಕೊಳ್ಳುತ್ತಿದ್ದರು.

ಈ ರೀತಿ ಪ್ರತಿ ಮಕ್ಕಳ ಮೇಲೆ ಶಿಕ್ಷಕರು ಹಾಗೂ ಇಲಾಖೆ ವಹಿಸುತ್ತಿದ್ದ ಕಾಳಜಿ ಪೋಷಕರಲ್ಲಿ ಅಪಾರ ವಿಶ್ವಾಸ ಮೂಡಿಸಿತ್ತು. ಎಸ್ಎಸ್ಎಲ್​ಸಿ ಪರೀಕ್ಷೆಯ ಮೊದಲ ದಿನ ಮಾತ್ರ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಆತಂಕವಿತ್ತು. ವ್ಯವಸ್ಥಿತವಾಗಿ ಪರೀಕ್ಷೆ ಪೂರ್ಣಗೊಂಡ ನಂತರ ಮೊದಲ ದಿನ ಇದ್ದಂತಹ ಆತಂಕ ಭರಿತ ವಾತಾವರಣ ಇನ್ನುಳಿದ ದಿನ ಎಲ್ಲರಲ್ಲೂ ಸಂಪೂರ್ಣ ಮಾಯವಾಗಿತ್ತು.

ಪೋಷಕರು ಸಹ ಮೊದಲ ದಿನ ಪರೀಕ್ಷಾ ಕೇಂದ್ರದ ಬಳಿ ಮಕ್ಕಳನ್ನು ಕರೆದುಕೊಂಡು ಬಂದು ಬಿಟ್ಟು ಹೋಗಿದ್ದರು. ನಂತರ ಇನ್ನುಳಿದ ದಿನ ಮಕ್ಕಳೇ ಸ್ವಯಂ ಪ್ರೇರಿತರಾಗಿ ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.