ತುಮಕೂರು: ಶಿಬಿರಗಳನ್ನು ಮಾಡುವುದು ದೊಡ್ಡ ವಿಚಾರವಲ್ಲ. ಅದರ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಂಡಾಗ ಮಾತ್ರ ಶಿಬಿರಗಳು ಯಶಸ್ವಿಯಾಗುತ್ತವೆ ಎಂದು ಸಿದ್ಧಗಂಗಾ ಮಠದ ಅಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ನುಡಿದರು.
ಜಿಲ್ಲಾಸ್ಪತ್ರೆ, ಶ್ರೀ ಸಿದ್ಧಗಂಗಾ ಆಸ್ಪತ್ರೆ, ಜಿಲ್ಲಾ ಆಯುರ್ವೇದ ಆಸ್ಪತ್ರೆ ಮತ್ತು ಪದವೀಧರರ ಸಂಘ ಹಾಗೂ ಡ್ರೀಮ್ಸ್ ಫೌಂಡೇಶನ್ ಸಂಸ್ಥೆ ವತಿಯಿಂದ ಕನ್ನಡ ರಾಜ್ಯೋತ್ಸವ ಮತ್ತು ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಇಂತಹ ಶಿಬಿರಗಳು ಅಗತ್ಯವಾಗಿವೆ. ಸಾರ್ವಜನಿಕರ ರೋಗ ತಪಾಸಣೆ ಮತ್ತು ಅದಕ್ಕೆ ಸೂಕ್ತ ಔಷಧೋಪಚಾರ ನೀಡುವಂತದ್ದು ಶ್ರೇಷ್ಠವಾದ ಸೇವೆ ಎಂದು ಶ್ರೀಗಳು ನುಡಿದರು.