ತುಮಕೂರು: ತುಮಕೂರಿನ ಶ್ರೀ ಸಿದ್ದಗಂಗಾ ಮಠದಲ್ಲಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಠದ ಮಕ್ಕಳೊಂದಿಗೆ ಕೆಲಕಾಲ ಮಠದ ಅಂಗಳದಲ್ಲಿ ಕ್ರಿಕೆಟ್ ಆಡುವ ಮೂಲಕ ಗಮನ ಸೆಳೆದರು.
![Siddaganga Mutt Swamiji played cricket](https://etvbharatimages.akamaized.net/etvbharat/prod-images/kn-tmk-01-swaminicricket-script-7202233_04072019101356_0407f_1562215436_921.jpg)
ಸಿದ್ದಲಿಂಗ ಸ್ವಾಮೀಜಿಗಳು ಮಕ್ಕಳ ಬೌಲಿಂಗ್ಗೆ ಸಿಕ್ಸ್ ಹೊಡೆಯುವ ಮೂಲಕ ತಾವೂ ಓರ್ವ ಉತ್ತಮ ಕ್ರೀಡಾಪಟು ಎಂದು ತೋರಿಸಿಕೊಟ್ಟರು. ಸ್ವಾಮೀಜಿ ಬ್ಯಾಟ್ ಹಿಡಿದು ಬಾಲ್ ಬೌಂಡರಿ ಹೊರಗೆ ಅಟ್ಟುತ್ತಿದ್ದಂತೆ ಮಠದ ಮಕ್ಕಳು ಕುಣಿಯತೊಡಗಿದರು.
![Siddaganga Mutt Swamiji played cricket](https://etvbharatimages.akamaized.net/etvbharat/prod-images/kn-tmk-01-swaminicricket-script-7202233_04072019101356_0407f_1562215436_1026.jpg)
ಪ್ರಪಂಚದಾದ್ಯಂತ ವಿಶ್ವಕಪ್ ಕ್ರಿಕೆಟ್ ಜ್ವರ ಜೋರಾಗಿದ್ದು, ಸ್ವಾಮೀಜಿಯೊಬ್ಬರು ಬ್ಯಾಟ್ ಹಿಡಿದು ಅಂಗಳಕ್ಕೆ ಇಳಿದಿದ್ದು, ಕ್ರೀಡಾರ್ಥಿಗಳಲ್ಲಿ ಸ್ಪೂರ್ತಿ ತುಂಬಿದೆ ಅಂದ್ರೆ ತಪ್ಪಾಗಲಾರದು.
![Siddaganga Mutt Swamiji played cricket](https://etvbharatimages.akamaized.net/etvbharat/prod-images/kn-tmk-01-swaminicricket-script-7202233_04072019101356_0407f_1562215436_494.jpg)