ETV Bharat / state

ಶಿವಕುಮಾರ ಶ್ರೀಗಳ ಜನ್ಮದಿನವನ್ನು ಕಾಯಕ, ದಾಸೋಹದ ದಿನವನ್ನಾಗಿ ಮಾಡಿ: ಸಿದ್ಧಲಿಂಗ ಶ್ರೀ - undefined

ಸಿದ್ದಗಂಗಾ ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ ಜಯಂತಿಯನ್ನು ಕಾಯಕ ಹಾಗೂ ದಾಸೋಹದ ದಿನವನ್ನಾಗಿ ಮಾಡುವಂತೆ ಇಲ್ಲಿನ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಕರೆ ನೀಡಿದ್ದಾರೆ.

ಸಿದ್ಧಲಿಂಗ ಶ್ರೀ
author img

By

Published : Apr 2, 2019, 8:37 AM IST

ತುಮಕೂರು: ನಾವೆಲ್ಲರೂ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಮಾರ್ಗದಲ್ಲಿ ಸಾಗಬೇಕಿದೆ. ಅವರ ಜನ್ಮದಿನವನ್ನು ಕಾಯಕದ ದಿನವನ್ನಾಗಿ, ದಾಸೋಹದ ದಿನವನ್ನಾಗಿ ಮಾಡುವ ಮೂಲಕ ಶ್ರೀಗಳಿಗೆ ಗುರುವಂದನೆ ಸಲ್ಲಿಸಬೇಕಿದೆ ಎಂದು ಸಿದ್ದಗಂಗಾ ಮಠದ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ಹೇಳಿದರು.

ತುಮಕೂರು ನಾಗರಿಕ ವೇದಿಕೆ ವತಿಯಿಂದ ಲಿಂ. ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳ 112ನೇ ಜನ್ಮದಿನೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸಿದ್ಧಲಿಂಗ ಶ್ರೀ

ಈ ವೇಳೆ ಮಾತನಾಡಿದ ಅವರು, ತುಮಕೂರಿನ ಜನರು ಶ್ರೀಗಳ ಬಗ್ಗೆ ಇಟ್ಟಿರುವ ಅಪಾರ ನಂಬಿಕೆಗೆ ನಾನು ಆಭಾರಿಯಾಗಿದ್ದೇನೆ. ಅವರ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಿದೆ. ಈ ದಿನವನ್ನು ಕಾಯಕದ ದಿನವನ್ನಾಗಿ, ದಾಸೋಹದ ದಿನವನ್ನಾಗಿ ಮಾಡುವ ಮೂಲಕ ಶ್ರೀಗಳಿಗೆ ಗುರುವಂದನೆ ಸಲ್ಲಿಸಿ ಎಂದು ಸಲಹೆ ನೀಡಿದರು.

ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರಿಗೂ ಈ ಕಾಲೇಜು ಮೈದಾನಕ್ಕೂ ಅವಿನಾಭಾವ ಸಂಬಂಧವಿದೆ. ಇನ್ನು ಈ ಸ್ಥಳದಲ್ಲಿ ಕಾರ್ಯಕ್ರಮ ಆಯೋಜಿಸಿರುವುದೇ ವಿಶೇಷ. ಏಕೆಂದರೆ ಈ ಸ್ಥಳಕ್ಕೆ ಗಾಂಧೀಜಿ ಭೇಟಿ ನೀಡಿದ್ದರು. ಶ್ರೀಗಳು ಶಿಕ್ಷಣ ಪಡೆಯುವ ಸಂದರ್ಭ ಕೆಲ ದಿನಗಳ ಕಾಲ ಈ ಸ್ಥಳದಲ್ಲಿ ಉಳಿದುಕೊಂಡಿದ್ದರು. ಆದ್ದರಿಂದ ಶ್ರೀಗಳಿಗೂ ಈ ಸ್ಥಳಕ್ಕೂ ಒಂದು ರೀತಿಯ ಬಾಂಧವ್ಯವಿದೆ ಎಂದರು.

Intro:ತುಮಕೂರು: ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರಿಗೂ, ಈ ಕಾಲೇಜು ಮೈದಾನಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಸಿದ್ದಗಂಗಾ ಮಠದ ಮಠಧ್ಯಕ್ಷ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ತಿಳಿಸಿದರು.

Body:ತುಮಕೂರು ನಾಗರೀಕ ವೇದಿಕೆ ವತಿಯಿಂದ ಲಿಂ. ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳ 112ನೇ ಜನ್ಮದಿನೋತ್ಸವದ ಹಾಗೂ ಗುರುವಂದನಾ ಸಮಾರಂಭ ಕಾರ್ಯಕ್ರಮವು ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಸಿದ್ದಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಈ ಸ್ಥಳದಲ್ಲಿ ಕಾರ್ಯಕ್ರಮ ಆಯೋಜಿಸಿರುವುದೇ ವಿಶೇಷ. ಏಕೆಂದರೆ ಈ ಸ್ಥಳಕ್ಕೆ ಗಾಂಧೀಜಿ ಭೇಟಿ ನೀಡಿದ್ದರು, ಶ್ರೀಗಳು ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಕೆಲ ದಿನಗಳ ಕಾಲ ಈ ಸ್ಥಳದಲ್ಲಿ ಉಳಿದುಕೊಂಡಿದ್ದರು, ಆದ್ದರಿಂದ ಶ್ರೀಗಳಿಗೂ, ಈ ಸ್ಥಳಕ್ಕೂ ಒಂದು ರೀತಿಯ ಬಾಂಧವ್ಯವಿದೆ.
ಜೊತೆಗೆ ತುಮಕೂರಿನ ಜನರು ಶ್ರೀ ಗಳ ಬಗ್ಗೆ ಇಟ್ಟಿರುವ ಅಪಾರ ನಂಬಿಕೆ ನಾನು ಆಭಾರಿಯಾಗಿದ್ದೇನೆ, ಅವರ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಿದೆ. ಈ ದಿನವನ್ನು ಕಾಯಕದ ದಿನವನ್ನಾಗಿ, ದಾಸೋಹದ ದಿನವನ್ನಾಗಿ ಮಾಡುವ ಮೂಲಕ ಶ್ರೀಗಳಿಗೆ ಗುರುವಂದನೆ ಸಲ್ಲಿಸಿ ಎಂದು ಸಲಹೆ ನೀಡಿದರು. ನಂತರ ಮಾತನಾಡಿದ ಮಂಗಳೂರಿನ ಶ್ರೀ ರಾಮಕೃಷ್ಣಾಶ್ರಮದ ಶ್ರೀ ಜಿತಕಾಮಾನಂದಜಿ ಮಹಾರಾಜ್, ಶ್ರೀಗಳ ದರ್ಶನ ಪಡೆಯುವುದೇ ಒಂದು ಸೌಭಾಗ್ಯ, ಶ್ರೀಗಳು ಅಸಾಧಾರಣವಾದ ಆಧ್ಯಾತ್ಮಿಕ ವ್ಯಕ್ತಿತ್ವ ಹೊಂದಿದ್ದರು, ದೊಡ್ಡ ಆದರ್ಶವನ್ನು ನಮ್ಮ ಮುಂದೆ ಇಟ್ಟಿದ್ದಾರೆ, ಸಹಸ್ರಾರು ಭಕ್ತರ ಕಷ್ಟಗಳ ನಿವಾರಣೆ ಮಾಡಿದ ಕೀರ್ತಿ ಶ್ರೀಗಳದು.
ದೇಶದ ಪ್ರಗತಿ ಆಗಬೇಕೆಂದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ತೋರಿಸಿಕೊಟ್ಟ ಪೂಜ್ಯರು, ಸಾರ್ವತ್ರಿಕವಾಗಿ ಮನೆ- ಮನೆಯ ಬಾಗಿಲಿಗೆ ವಿದ್ಯಾಭ್ಯಾಸವನ್ನು ನೀಡಿ, ಬಡ ಮಕ್ಕಳಿಗೆ ವಿದ್ಯೆ ಗಗನ ಕುಸುಮವಾಗಿದ್ದ ಸಂದರ್ಭದಲ್ಲಿ ಶಿಕ್ಷಣದ ಜೊತೆಗೆ ಅವರ ಜೀವನ ರೂಪಿಸಿದ್ದಾರೆ.
ಇಂದು ಅವರು ತೋರಿಸಿರುವ ದಾರಿ ನಮ್ಮೆಲ್ಲರಿಗೂ ದಾರಿದೀಪವಾಗಿದೆ ಎಂದು ಶ್ರೀಗಳ ಬಗ್ಗೆ ಗುಣಗಾನ ಮಾಡಿದರು.

Conclusion:ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿರಿಗೆರೆಯ ಶ್ರೀ ತರಳಬಾಳು ಬೃಹನ್ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು.

ವರದಿ
ಸುಧಾಕರ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.