ETV Bharat / state

ಶಿರಾ ಉಪ ಸಮರ: ಪ್ರಚಾರ ಸಾಮಗ್ರಿಯಾಗಿ ಪರಿವರ್ತನೆಗೊಂಡ ಮಾಸ್ಕ್​ಗಳು! - ತುಮಕೂರು

ಚುನಾವಣಾ ಪ್ರಚಾರದ ಸಾಮಗ್ರಿಯಾಗಿ ಮಾಸ್ಕ್ ಬಳಕೆ ಮಾಡಲಾಗುತ್ತಿದೆ. ಮಾಸ್ಕ್ ಮೇಲೆ ಅಭ್ಯರ್ಥಿಯ ಭಾವಚಿತ್ರ ಹಾಗೂ ಪಕ್ಷದ ಚಿಹ್ನೆಯನ್ನು ಮುದ್ರಿಸಿ ಕಾರ್ಯಕರ್ತರಿಗೆ ವಿತರಿಸಲಾಗುತ್ತಿದೆ.

shira by-election
ಶಿರಾ ಉಪ ಕದನ: ಮಾಸ್ಕ್ ಮೇಲೆ ಅಭ್ಯರ್ಥಿಯ ಭಾವಚಿತ್ರ ..
author img

By

Published : Oct 8, 2020, 10:36 AM IST

Updated : Oct 8, 2020, 12:55 PM IST

ತುಮಕೂರು: ಶಿರಾ ಉಪ ಚುನಾವಣೆ ಮೂರು ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದೆ. ಇನ್ನು ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಲು ಸಿದ್ಧತೆ ನಡೆಸಿವೆ. ಈ ನಡುವೆ ಚುನಾವಣಾ ನೀತಿ ಸಂಹಿತೆಯಲ್ಲಿ ಮಾಸ್ಕ್ ಧರಿಸುವಿಕೆ ಕಡ್ಡಾಯವಾಗಿದ್ದು, ಆ ಮೂಲಕವೂ ಪ್ರಚಾರ ನಡೆಸುತ್ತಿದೆ.

ಶಿರಾ ಉಪ ಸಮರ: ಪ್ರಚಾರ ಸಾಮಗ್ರಿಯಾಗಿ ಪರಿವರ್ತನೆಗೊಂಡ ಮಾಸ್ಕ್​ಗಳು!

ಇದುವರೆಗೂ ವಿವಿಧ ರೀತಿಯ ಮಾಸ್ಕ್​​ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಇದೀಗ ಮಾಸ್ಕ್​ಗಳನ್ನು ಉಪ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿರುವುದು ಕುತೂಹಲಕಾರಿಯಾಗಿದೆ. ಪ್ರಚಾರದ ಸಾಮಗ್ರಿಯಾಗಿ ಮಾಸ್ಕ್ ಬಳಕೆ ಮಾಡಲಾಗುತ್ತಿದೆ. ಮಾಸ್ಕ್ ಮೇಲೆ ಅಭ್ಯರ್ಥಿಯ ಭಾವಚಿತ್ರ ಹಾಗೂ ಪಕ್ಷದ ಚಿಹ್ನೆಯನ್ನು ಮುದ್ರಿಸಿ ಕಾರ್ಯಕರ್ತರಿಗೆ ವಿತರಿಸಲಾಗುತ್ತಿದೆ. ಅಲ್ಲದೆ ಮತದಾರರಿಗೂ ಕೂಡ ಈ ಮಾಸ್ಕ್​ ವಿತರಿಸಲಾಗುತ್ತಿದೆ.

ಕ್ಷೇತ್ರದಲ್ಲಿ ಮೊದಲಿಗೆ ಕಾಣಿಸಿಕೊಂಡಿರುವ ಕಾಂಗ್ರೆಸ್ ಪಕ್ಷದ ಮಾಸ್ಕ್​​ಗಳ ಮೇಲೆ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಹಾಗೂ ಪಕ್ಷದ ಚಿಹ್ನೆ ಹಸ್ತದ ಗುರುತನ್ನು ಪ್ರಿಂಟ್ ಮಾಡಲಾಗಿದೆ. ಈ ಮಾಸ್ಕ್​ಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಧರಿಸಿಕೊಂಡು ಕ್ಷೇತ್ರದಲ್ಲಿ ಓಡಾಡುತ್ತಿರುವುದು ಕಂಡುಬರುತ್ತಿದೆ.

Last Updated : Oct 8, 2020, 12:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.