ETV Bharat / state

ತುಮಕೂರು : ಸ್ವಯಂ ಪ್ರೇರಿತ ಬಂದ್​ಗೆ ಮುಂದಾದ ವ್ಯಾಪಾರಸ್ಥರು..

author img

By

Published : Apr 23, 2021, 5:03 PM IST

ಕೊರೊನಾ 2ನೇ ಅಲೆಯ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ತುಮಕೂರು ನಗರದ ವ್ಯಾಪಾರಿಗಳು ಸ್ವಯಂ ಪ್ರೇರಿತ ಬಂದ್​ಗೆ ಮುಂದಾಗಿದ್ದಾರೆ..

self-motivated-bundh-in-tumkur
ಸ್ವಯಂ ಪ್ರೇರಿತ ಬಂದ್​ಗೆ ಮುಂದಾದ ವ್ಯಾಪಾರಸ್ಥರು

ತುಮಕೂರು : ನಗರದಲ್ಲಿ ನಿನ್ನೆ ಏಕಾಏಕಿ ಪೊಲೀಸರು ಆಗಮಿಸಿ ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಸೂಚಿಸಿದ್ದರು. ಆದರೆ, ಇಂದು ಅಂಗಡಿ ಮಾಲೀಕರು ಸ್ವಯಂ ಪ್ರೇರಿತರಾಗಿ ವಹಿವಾಟನ್ನು ಸ್ಥಗಿತಗೊಳಿಸಿದ್ದಾರೆ.

ನಗರದ ಪ್ರಮುಖ ವಾಣಿಜ್ಯ ಚಟುವಟಿಕೆಗಳು ನಡೆಯುವ ಎಂ ಜಿ ರಸ್ತೆ, ಬಸ್ಟ್ಯಾಂಡ್ ರಸ್ತೆ, ಬಿಹೆಚ್ ರಸ್ತೆ ಸೇರಿ ಬಹುತೇಕ ಎಲ್ಲಾ ರಸ್ತೆಗಳಲ್ಲಿ ಅಂಗಡಿ-ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿವೆ.

ಸ್ವಯಂ ಪ್ರೇರಿತ ಬಂದ್​ಗೆ ಮುಂದಾದ ವ್ಯಾಪಾರಸ್ಥರು..

ನಗರದಲ್ಲಿ ಕೆಎಸ್​ಆರ್​ಟಿಸಿ, ಖಾಸಗಿ ಬಸ್​ಗಳ ಸಂಚಾರ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ವ್ಯತ್ಯಯವಾಗಿರಲಿಲ್ಲ. ಆಟೋಗಳ ಸಂಚಾರ ಕೂಡ ಅಭಾದಿತವಾಗಿತ್ತು. ಸಾರ್ವಜನಿಕರು ಕೂಡ ಸಹಜ ಸ್ಥಿತಿಯಲ್ಲಿ ರಸ್ತೆಗಳಲ್ಲಿ ಓಡಾಡುತ್ತಿದ್ದರು.

ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆಗಳು ನಡೆಯದಿರುವುದರಿಂದ ಪ್ರಮುಖ ರಸ್ತೆಗಳಲ್ಲಿ ಜನಸಂಚಾರ ಕೂಡ ವಿರಳವಾಗಿತ್ತು. ಹೋಟೆಲ್​ಗಳು, ಬೇಕರಿಗಳು ಹಾಗೂ ತರಕಾರಿ ಅಂಗಡಿಗಳು ತೆರೆದಿದ್ದವು. ಬಹುತೇಕ ಎಲ್ಲಾ ಗ್ರಾಮೀಣ ಭಾಗದಲ್ಲಿಯೂ ಕೂಡ ಇದೇ ರೀತಿಯ ಸ್ಥಿತಿ ಮುಂದುವರೆದಿದೆ.

ಓದಿ: ತಜ್ಞರು ವರದಿ ನೀಡಿದ್ದರೂ ಕೇಂದ್ರ, ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಳ್ಳಲಿಲ್ಲ: ಸಿದ್ದರಾಮಯ್ಯ ಆಕ್ರೋಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.