ತುಮಕೂರು: ಜಿಲ್ಲೆಯಲ್ಲಿ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗಾಗಿ ಮಧುಗಿರಿ, ಶಿರಾ, ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ ತಾಲೂಕುಗಳ ಒಟ್ಟು 161 ಗ್ರಾಮ ಪಂಚಾಯಿತಿಗಳ 2,400 ಸದಸ್ಯ ಸ್ಥಾನಗಳಿಗೆ 1,321 ಮತಗಟ್ಟೆಗಳಲ್ಲಿ ಡಿಸೆಂಬರ್ 27 ರಂದು ಮತದಾನ ನಡೆಯಲಿದೆ.
5 ತಾಲೂಕುಗಳಲ್ಲಿ ಶಾಂತಿಯುತ ಮತದಾನಕ್ಕೆ ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಮಾಡಿದ್ದು, ಚುನಾವಣಾ ಮತದಾನವು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. 131 ಅತಿ ಸೂಕ್ಷ್ಮ, 198 ಸೂಕ್ಷ್ಮ ಹಾಗೂ 992 ಸಾಮಾನ್ಯ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.
ಮತದಾನ ಮಾಡಲು ಬರುವ ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಮತದಾರರು ಮತಗಟ್ಟೆಗೆ ಆಗಮಿಸಿದಾಗ ಮೊದಲಿಗೆ ಥರ್ಮಲ್ ಸ್ಯ್ಕಾನಿಂಗ್ ಹಾಗೂ ಕೈಗಳನ್ನು ಸ್ಯಾನಿಟೈಸ್ ಮಾಡಲಾಗುವುದು. ಇನ್ನು ಮತದಾರರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮತ ಚಲಾಯಿಸಬೇಕು.
ಕೋವಿಡ್ ಸೋಂಕಿತರಿಗೆ ಒಂದು ಗಂಟೆ ಮೀಸಲು:
ಕೋವಿಡ್ ಸೋಂಕಿತರು ಹಾಗೂ ಕೋವಿಡ್ ಶಂಕಿತರು ಪಿಪಿಇ ಕಿಟ್ ಧರಿಸಿ ಸಂಬಂಧಪಟ್ಟ ಮತಗಟ್ಟೆಗಳಲ್ಲಿ ಮತದಾನದ ಕೊನೆಯ ಒಂದು ಗಂಟೆಯ ಅವಧಿಯಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಓದಿ: ಸಿಸಿಬಿ ತನಿಖಾಧಿಕಾರಿಗಳ ಮುಂದೆ ಹಾಜರಾದ ನಟಿ ಸಂಜನಾ ಗಲ್ರಾನಿ
ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದು, ಇದಕ್ಕಾಗಿ ಡಿಎಸ್‍ಪಿ-5, ಸಿಪಿಐ/ಪಿಐ-15, ಪಿಎಸ್‍ಐ-49, ಎಎಸ್‍ಐ-73, ಹೆಚ್‍ಸಿ-141, ಪಿಸಿ-872, ಹೆಚ್‍ಜಿ-627, ಡಿಎಆರ್-5 ತುಕಡಿ ಕೆಎಸ್‍ಆರ್‍ಪಿ-5 ತುಕಡಿ ಸೇರಿದಂತೆ ಒಟ್ಟು 1,792 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.