ತುಮಕೂರು: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಅಪಾರ ಪ್ರಮಾಣದ ಮಳೆಯಾಗಿದ್ದು, ಬರಪೀಡಿತ ತಾಲೂಕು ಎಂದೇ ಪರಿಗಣಿಸಲಾಗಿರುವ ಪಾವಗಡ ತಾಲೂಕಿನಲ್ಲೂ ಎಲ್ಲೆಂದರಲ್ಲಿ ಮಳೆಯ ನೀರು ಸಂಗ್ರಹಗೊಂಡಿದೆ. ಅತಿ ದೊಡ್ಡ ಸೋಲಾರ್ ಪಾರ್ಕ್ ಕೂಡ ಮುಳುಗಡೆಯಾಗಿದ್ದು, ಅಪಾರ ಪ್ರಮಾಣದ ನೀರು ಸುಮಾರು 12,500 ಎಕರೆ ಪ್ರದೇಶವನ್ನು ಆವರಿಸಿಕೊಂಡಿದೆ.
ಪಾವಗಡ ತಾಲೂಕಿನ ವಳ್ಳೂರು ಮತ್ತು ಕ್ಯಾತಗಾನ ಕೆರೆ ಗ್ರಾಮಗಳ ಮಧ್ಯೆ ಸೌರ ವಿದ್ಯುತ್ ಉತ್ಪಾದನಾ ಘಟಕವಿದೆ. ಎರಡು ಸಾವಿರ ಮೆಗಾವ್ಯಾಟ್ನ 12,500 ಎಕರೆ ಪ್ರದೇಶದ ಸೌರ ವಿದ್ಯುತ್ ಘಟಕ ಪಾರ್ಕ್ ಮುಳುಗಡೆಯಾಗಿದೆ.
ಆದರೆ, ಸೆಕ್ಯೂರಿಟಿ ಮತ್ತು ಸೌರ ಪಾರ್ಕ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟಕದಲ್ಲಿ ಯುವಕರು ಈಜಾಡುತ್ತಿರುವುದು ಕಂಡುಬಂದಿದೆ. ವಿದ್ಯುತ್ ಉತ್ಪಾದನೆ ಸಮಯದಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಅವಘಡ ಸಂಭವಿಸಿದರೆ ಹೊಣೆಯಾರು ಎಂಬ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಮುಂದುವರೆದ ಮಳೆ: ಕೆರೆ ಕಟ್ಟೆ ಒಡೆದು ಬೆಳೆ ಹಾನಿ, ಅನ್ನದಾತ ಕಂಗಾಲು