ತುಮಕೂರು: ಕೋಲ್ಕತಾ ಮೂಲದ ಖಾಸಗಿ ಫೈನಾನ್ಸ್ನಿಂದ ಟ್ರ್ಯಾಕ್ಟರ್ ಖರೀದಿಸಲು 4 ಲಕ್ಷ ರೂ. ಸಾಲ ಪಡೆದಿದ್ದ ರೈತ ಉಳಿದ ಎರಡೇ ಕಂತುಗಳನ್ನು ಕಟ್ಟದ ಹಿನ್ನೆಲೆಯಲ್ಲಿ ಆತನಿಗೆ ಫೈನಾನ್ಸ್ ಕಂಪನಿ ನ್ಯಾಯಾಲಯಕ್ಕೆ ಬಂದು ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.
ಗುಬ್ಬಿ ತಾಲೂಕಿನ ಹೊಸಳ್ಳಿಯ ರೈತ ರಾಜಣ್ಣ ಎಂಬುವರು ತುಮಕೂರು ನಗರದ ಮ್ಯಾಗ್ಮಾ ಫಿನ್ ಕಾರ್ಪ್ ಲೀ. ಕಂಪನಿಯಿಂದ 4 ಲಕ್ಷ ರೂ. ಸಾಲ ಪಡೆದಿದ್ದರು. ಇನ್ನುಳಿದಿದ್ದ ಎರಡು ಕಂತಿನ ಹಣವನ್ನು ಕಟ್ಟಿರಲಿಲ್ಲ. ಹೀಗಾಗಿ ಕೋಲ್ಕತಾ ಕೋರ್ಟ್ಗೆ ಹಾಜರಾಗುವಂತೆ ಮ್ಯಾಗ್ಮಾ ಫಿನ್ ಕಾರ್ಪ್ ಲೀ. ಕಂಪನಿ ರೈತ ರಾಜಣ್ಣನಿಗೆ ನೋಟಿಸ್ ಜಾರಿ ಮಾಡಿದೆ.
ಮ್ಯಾಗ್ಮಾ ಫೈನಾನ್ಸ್‌ನ ಪ್ರಧಾನ ಶಾಖೆ ಕೋಲ್ಕತಾದಲ್ಲಿದೆ. ಸಾಲ ಕಟ್ಟಲಾಗದೇ ಮತ್ತು ದೂರದ ಕೋಲ್ಕತಾ ಕೋರ್ಟ್ಗೆ ಹೋಗಲಾಗದೆ ರೈತ ರಾಜಣ್ಣ ಕಂಗಾಲಾಗಿದ್ದಾರೆ.
ತುಮಕೂರು ಕೋರ್ಟ್ಗೆ ಪ್ರಕರಣ ವರ್ಗಾಯಿಸಿದ್ರೆ ನಿಭಾಯಿಸಬಹುದಿತ್ತು ಎಂದು ಅವಲೊತ್ತುಕೊಳ್ತಿದ್ದಾರೆ ನೊಂದ ರೈತ ರಾಜಣ್ಣ.