ತುಮಕೂರು: ಮಾರುಕಟ್ಟೆಯಲ್ಲಿ ಅತಿ ಕನಿಷ್ಠ ಬೆಲೆಗೆ ಕೊತ್ತಂಬರಿ ಸೊಪ್ಪು ಮಾರಾಟ ಮಾಡಲು ಇಚ್ಛಿಸದ ತುಮಕೂರಿನ ಮಹಾನಗರ ಪಾಲಿಕೆ ಸದಸ್ಯರೊಬ್ಬರು ಜನರಿಗೆ ಉಚಿತವಾಗಿ ಕೊತ್ತಂಬರಿ ಸೊಪ್ಪನ್ನು ವಿತರಣೆ ಮಾಡಿದ್ದಾರೆ.
ಜನ ತಾಮುಂದು, ನಾಮುಂದು ಎಂದು ಕೊತ್ತಂಬರಿ ಸೊಪ್ಪು ಪಡೆದುಕೊಂಡಿದ್ದಾರೆ. ತುಮಕೂರು ನಗರದ ಎಂ.ಆರ್.ಕಾಲೋನಿಯಲ್ಲಿ ಪಾಲಿಕೆ ಸದಸ್ಯ ಶ್ರೀನಿವಾಸ್ ಉಚಿತವಾಗಿ ಕೊತ್ತಂಬರಿ ವಿತರಣೆ ಮಾಡಿದ್ದಾರೆ.
ಈ ವೇಳೆ ಸೊಪ್ಪು ಪಡೆಯಲು ಜನ ಮುಗಿಬೀಳುತ್ತಿದ್ದುದನ್ನು ಕಂಡು ರೋಸಿ ಹೋದ ಹಂಚುತ್ತಿದ್ದ ಯುವಕರು ರಾಶಿ ರಾಶಿ ಸೊಪ್ಪನ್ನು ಜನರತ್ತ ಎಸೆದಿದ್ದಾರೆ. ಆದರೂ ಜನ ಮುಗಿಬೀಳುವುದನ್ನು ಬಿಡಲಿಲ್ಲ. ಇದ್ರಿಂದ ರೋಸಿ ಹೋದ ಸೊಪ್ಪು ಹಂಚುತ್ತಿದ್ದ ಯುವಕರು ಸೊಪ್ಪಿನಲ್ಲಿ ಹೊಡೆದ ಘಟನೆಯೂ ನಡೆಯಿತು.
ಇದನ್ನೂ ಓದಿ: ಕೊನೆಗೂ ಮ್ಯಾಪ್ ಡಿಲೀಟ್: ಟ್ವಿಟರ್ ಇಂಡಿಯಾ ಎಂಡಿ ವಿರುದ್ಧ ದೂರು