ETV Bharat / state

ನುಡಿದಂತೆ ಮೋದಿ ನಡೆಯಲ್ಲ: ಹೆಚ್​​ಡಿ ದೇವೇಗೌಡ ಗರಂ - Modi wont do as he says

ದೇಶದಲ್ಲಿ ರೈತರ ಸಾಲಮನ್ನ ಮಾಡಿದ ಏಕೈಕ ಮುಖ್ಯಮಂತ್ರಿ ಕುಮಾರಸ್ವಾಮಿ. ನುಡಿದಂತೆ ನಡೆಯುವ ಮುಖ್ಯಮಂತ್ರಿ ಯಾರಾದರೂ ಇದ್ದರೆ ಅದು ಕುಮಾರಸ್ವಾಮಿ ಒಬ್ಬರೇ ಎಂದು ಮಾಜಿ ಪ್ರಧಾನಿ ಹೆಚ್​ಡಿ ದೇವವೇಗೌಡರು ಹೇಳಿದರು.

modi-wont-do-as-he-says-hd-deve-gowda
ನುಡಿದಂತೆ ಮೋದಿ ನಡೆಯಲ್ಲ: ಹೆಚ್​​ಡಿ ದೇವೇಗೌಡ
author img

By

Published : May 2, 2023, 5:05 PM IST

ನುಡಿದಂತೆ ಮೋದಿ ನಡೆಯಲ್ಲ: ಹೆಚ್​​ಡಿ ದೇವೇಗೌಡ

ತುಮಕೂರು: ಮಾಜಿ ಪ್ರಧಾನಿ ಎಚ್​​ಡಿ ದೇವೇಗೌಡ ಅವರು ಇಂದು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ತಿಮ್ಮನಹಳ್ಳಿಯಲ್ಲಿ ನಡೆದ ಸಾರ್ವಜನಿಕೆ ಸಭೆಯಲ್ಲಿ ಪಾಲ್ಗೊಂಡು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸುರೇಶ್ ಬಾಬು ಪರವಾಗಿ ಮತಯಾಚಿಸಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, "ನಾನು 90ನೇ ವಯಸ್ಸಿನಲ್ಲಿ ದಿನಕ್ಕೆ ಏಳೆಂಟು ಸಭೆಗಳಲ್ಲಿ ಭಾಗವಹಿಸುತ್ತಿದ್ದೇನೆ. ಕುಮಾರಸ್ವಾಮಿ ಅವರು ಪ್ರತಿ ಹಳ್ಳಿಗೆ ಶುದ್ಧ ನೀರನ್ನು ಕೊಡಿಸುವ ವಿಶೇಷವಾದ ಕಾರ್ಯಕ್ರಮವನ್ನು ಮಾಡಲು ಮುಂದಾಗಿದ್ದಾರೆ. ಈ ರಾಷ್ಟ್ರದಲ್ಲಿ ಕುಡಿವ ನೀರಿನ ಸಮಸ್ಯೆ, ನದಿ, ಉಪನದಿಗಳ ಬಗ್ಗೆ ಕುಮಾರಸ್ವಾಮಿ ಅವರು ಮಾಹಿತಿ ಸಂಗ್ರಹ ಮಾಡಿದ್ದಾರೆ ಎಂದು ಹೇಳಿದರು.

ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದ್ದು ಯಾರು. ಈದ್ಗಾ ಮೈದಾನ ಸಮಸ್ಯೆ ಬಗೆಹರಿಸಿದ್ದು ಯಾರು. ಬಿಜೆಪಿ ಹೆಸರನ್ನು ಹೇಳಿ ಮಾತನಾಡಲು ನಾನು ಸಿದ್ಧವಿಲ್ಲ. ಬಿಜೆಪಿಯವರು ಮೀಸಲಾತಿ ರದ್ದು ಮಾಡುತ್ತೇವೆ ಎಂದು ಹೇಳುತ್ತಾರೆ. ಇದಕ್ಕೆ ಸುಪ್ರೀಂಕೋರ್ಟ್ ಆತಂಕ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಮತ್ತೇ ಕುಮಾರಸ್ವಾಮಿ ಅಧಿಕಾರಕ್ಕೆ ಬಂದ ತಕ್ಷಣ ಮುಸ್ಲಿಮರ ಮೀಸಲಾತಿಯನ್ನು ವಾಪಸ್ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಮೋದಿ ಜೀ ಭಾಷಣದಲ್ಲಿ ನಿಮ್ಮ ಬಗ್ಗೆ ಹೇಳಬೇಡಿ, ಜನರ ಬಗ್ಗೆ ಮಾತನಾಡಿ: ರಾಹುಲ್​ ಗಾಂಧಿ

ಲೋಕಸಭೆಯಲ್ಲಿ ನನ್ನ ಸಚಿವ ಸಂಪುಟದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೊದಲ ಬಾರಿಗೆ ಮೀಸಲಾತಿಯನ್ನು ನೀಡಿದ್ದೆವು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹಿಳೆಯರಿಗೆ ಶಕ್ತಿ ತುಂಬುತ್ತೇವೆ ಹೇಳುತ್ತಾರೆ. ಆದರೆ ನುಡಿದಂತೆ ಮೋದಿ ನಡೆಯಲ್ಲ. ಈ ವಿಚಾರದ ಬಗ್ಗೆ ಪ್ರಧಾನಿ ಅವರಿಗೆ ಪತ್ರ ಬರೆದಿದ್ದೇನೆ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸು ಮಾಡುವಂತೆ ಪತ್ರದಲ್ಲಿ ಬರೆದಿದ್ದೇನೆ. ದೇವೇಗೌಡರಿಂದ ಯಾವುದೇ ಒಂದು ಸಮಾಜಕ್ಕೆ ಅನ್ಯಾಯವಾಗಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್ ನದ್ದು ಪಿಎಫ್ಐ ಪ್ರಚೋದಿತ ಪ್ರಣಾಳಿಕೆ, ಮೂಲಭೂತವಾದಿ ಮನಸ್ಥಿತಿಯವರು ರಚಿಸಿದ ಮ್ಯಾನಿಫೆಸ್ಟೊ: ಅಸ್ಸೋಂ ಸಿಎಂ

ಕುಮಾರಸ್ವಾಮಿ ಅವರು ಸ್ತ್ರೀ ಶಕ್ತಿ ಸಂಘದ ಸಂಪೂರ್ಣ ಸಾಲಮನ್ನಾ ಮಾಡುತ್ತೇನೆ ಎಂದು ಹೇಳಿದ್ದಾರೆ. ದೇಶದಲ್ಲಿ ರೈತರ ಸಾಲಮನ್ನಾ ಮಾಡಿದ ಏಕೈಕ ಮುಖ್ಯಮಂತ್ರಿ ಕುಮಾರಸ್ವಾಮಿ. ನುಡಿಯುವಂತೆ ನಡೆಯುವ ಮುಖ್ಯಮಂತ್ರಿ ಯಾರಾದರು ಇದ್ದರೆ ಅದು ಕುಮಾರಸ್ವಾಮಿ ಒಬ್ಬರೆ. ಈಗಾಗಲೇ ಜೆಡಿಎಸ್​​ ಪ್ರಣಾಳಿಕೆಯಲ್ಲಿ ರೈತರಿಗೆ 5 ಸಾವಿರ ಮಾಸಾಶನ ಕೊಡುತ್ತೇವೆ ಎಂದು ಹೇಳಿದ್ದಾರೆ. ಅಪಪ್ರಚಾರಕ್ಕೆ ತಾವು ಮಾರು ಹೋಗಬಾರದು.‌ ವಾಲ್ಮೀಕಿ ಸಮಾಜಕ್ಕೆ ಮೀಸಲಾತಿಯನ್ನು ತಂದವರು ನಮ್ಮ ಸರ್ಕಾರದ ಅವಧಿಯಲ್ಲಿಯೇ ಎಂದು ಹೇಳಿದರು.

ಸುರೇಶ್​​ ಬಾಬು ಅವರ ಮನಸಿನ ನೋವನ್ನು ಹೇಳಿಕೊಂಡಿದ್ದಾರೆ. ಅವರು ಯಾವುದೇ ಆಮಿಷಕ್ಕೆ ಒಳಗಾಗದೆ, ದೇವೇಗೌಡರ ಪಕ್ಷದಲ್ಲಿ ಉಳಿಯುತ್ತೇನೆ ಎಂದು ಹೇಳಿದವರು ಸುರೇಶ್ ಬಾಬು. ತನೆಹೊತ್ತ ಮಹಿಳೆಯ ಗುರುತಿಗೆ ಮತ ನೀಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡರು.

ಇದನ್ನೂ ಓದಿ : ಬೆಳಗಾವಿ ಜಿಲ್ಲೆಯಲ್ಲಿ ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸಿಗೆ ಮನ್ನಣೆ: ಪ್ರಭಾವಿ ಕುಟುಂಬಗಳದ್ದೇ ಬಿಗಿಹಿಡಿತ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.