ETV Bharat / state

ಮಂಡಿನೋವಿನಿಂದ ಬಳಲುತ್ತಿದ್ದ ಕ್ರೀಡಾಪಟುವಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡಿದ ಶಾಸಕ ಡಾ.ರಂಗನಾಥ್

author img

By ETV Bharat Karnataka Team

Published : Oct 22, 2023, 8:18 PM IST

Updated : Oct 22, 2023, 9:32 PM IST

ಮಹಿಳಾ ಕ್ರೀಡಾಪಟುವಿಗೆ ಮಂಡಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಶಾಸಕ ಡಾ.ಹೆಚ್​.ಡಿ.ರಂಗನಾಥ್​ ಮಾನವೀಯತೆ ಮೆರೆದಿದ್ದಾರೆ.

ಕ್ರೀಡಾಪಟುವಿಗೆ ಉಚಿತ ಚಿಕಿತ್ಸೆ ಮಾಡಿದ ಶಾಸಕ ಡಾ ರಂಗನಾಥ್

ತುಮಕೂರು: ಮಂಡಿ ನೋವಿನಿಂದ ಬಳಲುತ್ತಿದ್ದ ಅಂತರರಾಷ್ಟ್ರೀಯ ರಗ್ಬಿ (ಅಮೆರಿಕನ್ ಫುಟ್‌ಬಾಲ್) ಕ್ರೀಡಾಪಟುವಿಗೆ ವೈದ್ಯರೂ ಆಗಿರುವ ಕುಣಿಗಲ್ ಶಾಸಕ ಡಾ.ಹೆಚ್.ಡಿ.ರಂಗನಾಥ್ ತಮ್ಮ ಸಹೋದ್ಯೋಗಿ ವೈದ್ಯರೊಂದಿಗೆ ಸೇರಿ ಮಂಡಿ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದರು.

ಮೂಲತಃ ಕುಣಿಗಲ್ ತಾಲೂಕಿನ ಹುತ್ತಿದುರ್ಗ ಯಲಿಯೂರು ಗ್ರಾಮದ, ಹಾಲಿ ಬೆಂಗಳೂರಿನ ಟೆಂಪೋ ಚಾಲಕ ರಂಗಸ್ವಾಮಿ ಅವರ ಪುತ್ರಿ ಆರ್. ಭವ್ಯ ರಗ್ಬಿ ಕ್ರೀಡಾಪಟು ಆಗಿದ್ದಾರೆ. ಕಳೆದ ಆರು ತಿಂಗಳ ಹಿಂದೆ ಅಭ್ಯಾಸದ ವೇಳೆ ಬಿದ್ದು ಬಲಭಾಗದ ಮಂಡಿಗೆ ಗಾಯವಾಗಿತ್ತು. ಭವ್ಯ ಅವರಿಗೆ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಶನಿವಾರ ಶಾಸಕ ಡಾ.ಹೆಚ್.ರಂಗನಾಥ್, ಡಾ. ಸಚಿನ್‌ ಗೌಡ, ಡಾ.ಶಿವರಾಜ್ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದರು.

ಆರ್.ಭವ್ಯ ಬಡ ಕುಟುಂಬದ ವಿದ್ಯಾರ್ಥಿನಿಯಾಗಿದ್ದಾರೆ. ಬೆಂಗಳೂರಿನ ಬಿಎಂಎಸ್‌ ಕಾಲೇಜಿನಲ್ಲಿ ದ್ವಿತೀಯ ಬಿ.ಎ.ಸೈಕಾಲಜಿ ಅಭ್ಯಾಸ ಮಾಡಿದ್ದು, ಜತೆಗೆ ರಗ್ಬಿ ತರಬೇತಿ ಪಡೆದು ಉತ್ತಮ ಕ್ರೀಡಾಪಟು ಆಗಿದ್ದರು. ಚೆನ್ನೈ, ಮಹಾರಾಷ್ಟ್ರ, ಪಂಜಾಬ್, ಒಡಿಶಾ ಮೊದಲಾದ ರಾಜ್ಯಗಳಲ್ಲಿ ಆಟವಾಡಿ ತಮ್ಮ ಕಾಲೇಜು ಹಾಗೂ ಕುಣಿಗಲ್ ತಾಲೂಕಿಗೆ ಕೀರ್ತಿ ತಂದಿದ್ದರು. ಚೆನ್ನೈನಲ್ಲಿ ಕಳೆದ ಆರು ತಿಂಗಳ ಹಿಂದೆ ಮಂಡಿ ನೋವು ಕಡಿಮೆಯಾಗಿ ಸ್ವಲ್ಪ ದಿನದ ನಂತರ ಮತ್ತೆ ಆಟ ಅಭ್ಯಾಸ ಪ್ರಾರಂಭಿಸಿದ್ದರು.

ರಾಷ್ಟ್ರಮಟ್ಟಕ್ಕೆ ಆಯ್ಕೆ: ಇದೇ ತಿಂಗಳು 22ರಂದು ಮಲೇಷಿಯಾದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ರಗ್ಬಿಗೆ ಭವ್ಯ ಆಯ್ಕೆಯಾಗಿದ್ದರು. ಈ ಹಿನ್ನೆಲೆಯಲ್ಲಿ ತಪಾಸಣೆಗೆಂದು ಹೋಗಿದ್ದಾಗ ರನ್ನಿಂಗ್​ ಸಾಧ್ಯವಾಗಿಲ್ಲ. ಕಾಲು ನೋವು ತೀವ್ರವಾಗಿದೆ. ಶಾಸಕ ರಂಗನಾಥ್ ಅವರ ಸಹೋದ್ಯೋಗಿ ವೈದ್ಯರ ಜತೆ ಸೇರಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದರು. ಈ ಮೂಲಕ ಆರ್ಥಿಕ ಹೊರೆ ಕಡಿಮೆ ಮಾಡಿ ನೆರವಾಗಿದ್ದಾರೆ.

ನನ್ನ ಮಂಡಿನೋವಿಗೆ ಸ್ಪಂದಿಸಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ ಡಾ.ರಂಗನಾಥ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ದಿನದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ರಗ್ಬಿ ಆಟ ಆಡುತ್ತೇನೆ ಎಂದು ಭವ್ಯ ತಿಳಿಸಿದರು.

ಓರ್ವ ಅಂತರರಾಷ್ಟ್ರೀಯ ಕ್ರೀಡಾಪಟುವಿಗೆ ನೆರವಾದ ಸಂತಸ ಒಂದೆಡೆ, ಇನ್ನೊಂದೆಡೆ ನನ್ನ ಕರ್ತವ್ಯ ಮಾಡುತ್ತಿದ್ದೇನೆ. ನನ್ನ ವೈದ್ಯ ವೃತ್ತಿಯಿಂದ ಇಂತಹ ನೂರಾರು ಕಾರ್ಯಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಶಸ್ತ್ರಚಿಕಿತ್ಸೆಗೆ ಸಹಕರಿಸಿದ ನನ್ನ ವೈದ್ಯ ಸಹೋದ್ಯೋಗಿಗಳಿಗೆ ಕೃತಜ್ಞತೆಗಳು ಎಂದು ಶಾಸಕ ಡಾ. ರಂಗನಾಥ್ ಹೇಳಿದ್ದಾರೆ.

ಇದನ್ನೂ ಓದಿ: ತಾಲೂಕು ಹಂತದ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಉದರದರ್ಶಕ ಚಿಕಿತ್ಸೆ ಯಶಸ್ವಿ

Last Updated : Oct 22, 2023, 9:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.