ತುಮಕೂರು: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಗೆ ಕಾರ್ಮಿಕ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಇಲ್ಲದೇ ಸಹಾಯಕ ಅಧಿಕಾರಿ ಹಾಜರಾಗಿದ್ದಕ್ಕೆ ಉಸ್ತುವಾರಿ ಸಚಿವ ಜೆ ಸಿ ಮಾಧುಸ್ವಾಮಿ ಕೆಂಡಾಮಂಡಲರಾದರು.
ತಿಪಟೂರು ತಾಲೂಕಿನ ಬಗ್ಗೆ ಮಾಹಿತಿ ನೀಡುತ್ತಿದ್ದ ಸಹಾಯಕ ಅಧಿಕಾರಿಯನ್ನು, ತಕ್ಷಣ ನೀವ್ಯಾರು ಎಂದು ಪ್ರಶ್ನೆ ಕೇಳಿದ ಸಚಿವರು, ಕಾರ್ಮಿಕ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಸಭೆ ಹಾಜರಾಗದೆ ಅಸಿಸ್ಟೆಂಟ್ನನ್ನು ಸಭೆಗೆ ಕಳುಹಿಸಿರುವುದನ್ನು ತಿಳಿದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ್ರು.
ಯಾತಕ್ಕೆ ಇದ್ದಿರಿ ಇಲ್ಲಿ..? ಈ ಮುಂಚೆಯೇ ಕ್ಲಿಯರ್ ಕಟ್ಟಾಗಿ ಜಿಲ್ಲಾಧಿಕಾರಿ ಮೀಟಿಂಗ್ ಕರೆದು ಹೇಳಿದ್ದೇನೆ. ಜಿಲ್ಲಾ ಮಟ್ಟದ ಅಧಿಕಾರಿಗಳನ್ನ ಬಿಟ್ಟು ಯಾವುದೇ ಕಾರಣಕ್ಕೂ ಅಸಿಸ್ಟೆಂಡ್ಗಳು ಸಭೆಗೆ ಹಾಜರಾಗದಂತೆ ಎಂದು ಮಾಧುಸ್ವಾಮಿ ತಿಳಿಸಿದರು.