ETV Bharat / state

ಕೃಷಿ ವಿಜ್ಞಾನ ಕೇಂದ್ರಕ್ಕೆ ಬಿಸಿ ಪಾಟೀಲ್ ದಿಢೀರ್​ ಭೇಟಿ : ಸಿಬ್ಬಂದಿ ಗೈರಿಗೆ ಕೆಂಡಾಮಂಡಲ

author img

By

Published : Jun 2, 2020, 7:41 PM IST

ತುಮಕೂರಿನ ತಿಪಟೂರಿನಿಂದ ಅರಸೀಕೆರೆ ತಾಲೂಕು ದೊಡ್ಡಮೇಟಿಯ ಕುರ್ಕೆಗೆ ಹೋಗುವ ಮಾರ್ಗ ಮಧ್ಯೆ ಬಿದರೆಗುಡಿ ಕಾವಲ್​ನ ಕೃಷಿ ವಿಜ್ಞಾನ ಕೇಂದ್ರಕ್ಕೆ ಕೃಷಿ ಸಚಿವ ಬಿ.ಸಿ. ಪಾಟೀಲ್​​​ ದಾಖಲೆಗಳ ಪರೀಶಿಲನೆ ನಡೆಸಿದರು. ಈ ವೇಳೆ, ಸಿಬ್ಬಂದಿ ಗೈರು ಹಾಜರಾತಿ ಕಂಡು ಅಸಮಾಧಾನ ವ್ಯಕ್ತಪಡಿಸಿದರು.

Minister BC Patil visit to Agricultural Science Center
ಕೃಷಿ ವಿಜ್ಞಾನ ಕೇಂದ್ರಕ್ಕೆ ಬಿಸಿ ಪಾಟೀಲ್ ದಿಢೀರ್​ ಭೇಟಿ

ತುಮಕೂರು : ಜಿಲ್ಲೆಯ ಬಿದರೆಗುಡಿ ಕಾವಲ್​ನ ಐಸಿಎಆರ್ ಪ್ರಾಯೋಜಿತ ಕೃಷಿ ವಿಜ್ಞಾನ ಕೇಂದ್ರಕ್ಕೆ ದಿಢೀರ್​ ಭೇಟಿ ನೀಡಿದ ಕೃಷಿ ಸಚಿವ ಬಿಸಿ ಪಾಟೀಲ್ ದಾಖಲೆಗಳ ಪರಿಶೀಲನೆ ನಡೆಸಿದರು.

ತಿಪಟೂರಿನಿಂದ ಅರಸೀಕೆರೆ ತಾಲೂಕು ದೊಡ್ಡಮೇಟಿಯ ಕುರ್ಕೆಗೆ ಹೋಗುವ ಮಾರ್ಗ ಮಧ್ಯೆ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಕಚೇರಿಯ ದಾಖಲೆಗಳು, ಸಿಬ್ಬಂದಿ ಹಾಜರಾತಿ ಪುಸ್ತಕ ಪರಿಶೀಲಿಸಿದರು.

ಈ ವೇಳೆ, ಕೃಷಿ ಕೇಂದ್ರದ ಮುಖ್ಯಸ್ಥ ಗೋವಿಂದೇಗೌಡರ ಗೈರು ಹಾಜರಿ ಬಗ್ಗೆ ಸಚಿವರು ಪ್ರಶ್ನಿಸಿದಾಗ ಗೋವಿಂದೇಗೌಡರು ಬೆಂಗಳೂರಿಗೆ ತೆರಳಿರುವುದಾಗಿ ಕಚೇರಿ ಸಿಬ್ಬಂದಿ ಮಾಹಿತಿ ನೀಡಿದರು. ಈ ವೇಳೆ, ಬೆಂಗಳೂರು ಕೃಷಿ ವಿವಿ ಕುಲಪತಿಗೆ ದೂರವಾಣಿ ಕರೆ ಮಾಡಿದ ಸಚಿವರು, ಗೋವಿಂದೇಗೌಡರ ಹಾಜರಾತಿ ಕುರಿತು ಮಾಹಿತಿ ಪಡೆದುಕೊಂಡರು. ಅಲ್ಲದೇ ಕಚೇರಿ ಸಿಬ್ಬಂದಿ ಗೈರು ಹಾಜರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.