ತುಮಕೂರು : ಜಿಲ್ಲೆಯಲ್ಲಿ ಒಂದೆಡೆ ಭರ್ಜರಿ ಮಳೆಯಾಗುತ್ತಿದೆ. ಇನ್ನೊಂದೆಡೆ ಹೇಮಾವತಿ ಜಲಾಶಯದಿಂದ (Hemavathi dam)ಹರಿದು ಬರುವ ನೀರಿನ ಪ್ರಮಾಣದಲ್ಲಿಯೂ ಗಣನೀಯವಾಗಿ ಏರಿಕೆಯಾಗುತ್ತಿದೆ. ಹೀಗಾಗಿ, ಜಿಲ್ಲೆಯ ಶಿರಾ ತಾಲೂಕಿನಲ್ಲಿರುವ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಮದಲೂರು ಕೆರೆಗೂ(Madaluru lake) ಭರಪೂರ ನೀರು ಹರಿದು ಬರುತ್ತಿದೆ.
ಶಿರಾ ಉಪಚುನಾವಣೆ ವೇಳೆ ಬಿಜೆಪಿ ಸರಕಾರ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ವಾಗ್ದಾನ ನೀಡಿತ್ತು. ಆದ್ರೆ, ನಂತರದಲ್ಲಿ ಹೇಮಾವತಿ ನೀರು(Hemavathi water)ಹರಿದರೂ ಕೆರೆ ತುಂಬದೆ ಬತ್ತಿ ಹೋಗಿತ್ತು.
ಆದ್ರೆ, ಪ್ರಸ್ತುತ ಹೇಮಾವತಿ ಜಲಾಶಯದಿಂದ ಹೊರ ಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಅದೀಗ 2816 ಕ್ಯೂಸೆಕ್ ಇದ್ದು, ತುಮಕೂರು ಜಿಲ್ಲೆಯ ನಾಲೆಗಳಲ್ಲಿಯೂ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.
ಹೀಗಾಗಿ, ಕೃಷ್ಣಾ ಜಲಾನಯನ ವ್ಯಾಪ್ತಿಯಲ್ಲಿ ಬರೋ ಮದಲೂರು ಕೆರೆಗೂ ಕಾವೇರಿ ಜಲಾನಯನ ವ್ಯಾಪ್ತಿಯ ಹೇಮಾವತಿ ಜಲಾಶಯದ ನೀರು ಹರಿದು ಬರುತ್ತಿರುವ ಹಿನ್ನೆಲೆ ಶಿರಾ ತಾಲೂಕಿನ ಜನ ಸಂತಸಗೊಂಡಿದ್ದಾರೆ. ಮದಲೂರು ಕೆರೆ ಬಹುತೇಕ ತುಂಬುವ ಹಂತದಲ್ಲಿದೆ. ಕೆರೆಯಲ್ಲಿ ಸುಮಾರು 5 ಅಡಿಗಳಷ್ಟು ನೀರು ಸಂಗ್ರಹವಾಗಿದೆ.
ಮದಲೂರು ಕೆರೆಯಲ್ಲಿ ನೀರು ಸಂಗ್ರಹವಾಗಿರುವುದರಿಂದ ಸುತ್ತಮುತ್ತಲ ಕೃಷಿ ಭೂಮಿಯಲ್ಲಿನ ಅಂತರ್ಜಲ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಇದ್ರಿಂದ ಮುಂದಿನ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ರೈತರು ಸಮೃದ್ಧ ಬೆಳೆ ಬೆಳೆಯುವ ಉತ್ಸುಕತೆಯಲ್ಲಿದ್ದಾರೆ.
ಇದನ್ನೂ ಓದಿ:ಮೇಕೆದಾಟು ವಿವಾದ ಆದಷ್ಟು ಬೇಗ ಬಗೆಹರಿಯುತ್ತದೆ: ಬೊಮ್ಮಾಯಿ ವಿಶ್ವಾಸ